alex Certify ʼಬಿಗ್ ಬಾಸ್ʼ ವಿಮರ್ಶೆಗೆ ಹೊರಟ ನವಾಜ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್ʼ ವಿಮರ್ಶೆಗೆ ಹೊರಟ ನವಾಜ್..!

ʼಬಿಗ್ ಬಾಸ್ʼ ನ‌ 9 ನೇ ಆವೃತ್ತಿ ಪ್ರಾರಂಭವಾಗ್ತಾ ಇದೆ. ಗ್ರ್ಯಾಂಡ್ ಓಪನಿಂಗ್ ಶನಿವಾರ ಆರಂಭವಾಗಿದೆ. ಸುಮಾರು 100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದ್ದು 18 ಜನ ಸ್ಪರ್ಧಿಗಳು ದೊಡ್ಡ ಮನೆಯಲ್ಲಿ ಸೆಣಸಾಡಲಿದ್ದಾರೆ. ಹಳಬರು, ಹೊಸಬರ ನಡುವೆ ಈ ಬಾರಿ ಆಟ ನಡೆಯಲಿದೆ.

ಈಗಾಗಲೇ ಕೆಲವು ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಡಿದ್ದಾರೆ. ಇದೀಗ ಅಚ್ಚರಿಯ ಸ್ಪರ್ಧಿಯೊಬ್ಬರು ಮನೆಯೊಳಗೆ ಕಾಲಿಟ್ಟಿದ್ದಾರೆ.‌ ಅವರೇ ರಿವ್ಯೂ ನವಾಜ್. ಸದಾ ಸಿನಿಮಾ ರಿವ್ಯೂ ಮಾಡುತ್ತಾ ಜನ ಮನ ಗೆದ್ದಿದ್ದ ಇವರು ಇದೀಗ ಬಿಗ್ ಬಾಸ್ ರಿವ್ಯೂ ಗೆ ಹೋಗಿದ್ದಾರೆ.

ಇತ್ತೀಚೆಗೆ ಯಾವುದೇ ಸಿನಿಮಾ ರಿಲೀಸ್ ಆದರೂ ಮಾಧ್ಯಮಗಳಿಗಿಂತ ಮುಂಚೆ ಸಿನಿಮಾ ಬಗ್ಗೆ ಹೇಳೋದು ಈ ನವಾಜ್. ತಮ್ಮದೇ ಆದ ಮಾತಿನ ಮೂಲಕ ಸಿನಿಮಾ ಬಗ್ಗೆ ಮಾತನಾಡುವ ಈತ ಸ್ವಲ್ಪ ದಿನದಲ್ಲೇ ಸಕ್ಕತ್ ಫೇಮಸ್ ಆದವರು. ಇದೀಗ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ಆಟ ನೋಡಿ ಜನರ ರಿವ್ಯೂ ಹೇಗಿದೆ ಅಂತ ಕಾದು ನೋಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...