alex Certify ʼಬಿಗ್ ಬಾಸ್ʼ ಗೆ ಹೋಗುವ ಸ್ಪರ್ಧಿಗಳು ಇವರೇ ನೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್ ಬಾಸ್ʼ ಗೆ ಹೋಗುವ ಸ್ಪರ್ಧಿಗಳು ಇವರೇ ನೋಡಿ..!

ಬಿಗ್ ಬಾಸ್ ನ 9ನೇ ಆವೃತ್ತಿ ಆರಂಭ ಆಗ್ತಾ ಇದೆ. ಕನ್ನಡ ಕಿರುತೆರೆಯಲ್ಲೇ ಖ್ಯಾತ ರಿಯಾಲಿಟಿ ಶೋ ಎಂದೆನಿಸಿಕೊಂಡ ಬಿಗ್ ಬಾಸ್ ತನ್ನ ಒಂಬತ್ತನೇ ಆವೃತ್ತಿ ಆರಂಭ ಮಾಡ್ತಾ ಇದೆ. ಇತ್ತೀಚೆಗಷ್ಟೆ ಒಟಿಟಿ ಯಲ್ಲಿ ಬಿಗ್ ಬಾಸ್ ಆರಂಭವಾಗಿ ಮುಗಿದಿದೆ. ಇದೀಗ ಟಿವಿ ಶೋ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗಲಿದೆ.

ಪ್ರತಿ‌ಬಾರಿ ಬಿಗ್ ಬಾಸ್ ಆರಂಭಕ್ಕೂ ಮುನ್ನ ಒಂದು ಕುತೂಹಲ ಇದ್ದೇ ಇರುತ್ತದೆ. ಈ ಬಾರಿ ಯಾರು ದೊಡ್ಡ ಮನೆಯೊಳಗೆ ಹೋಗ್ತಾರೆ ಅಂತ. ಈ ಬಾರಿಯೂ ಅಂತದ್ದೇ ಆದ ಒಂದು ಕುತೂಹಲ ಇದೆ. ಅದಕ್ಕೆ ಉತ್ತರ ಇಲ್ಲಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಕೊಂಚ ವಿಭಿನ್ನವಾಗಿ ಇರಲಿದೆ. ಯಾಕಂದ್ರೆ ಈ ಬಾರಿ ಒಟ್ಟು 18. ಜನ ಸ್ಪರ್ಧಿಗಳು ಇರಲಿದ್ದಾರೆ.

ಒಟಿಟಿಯಲ್ಲಿ ಭಾಗಿಯಾಗಿದ್ದ ನಾಲ್ಕು ಜನ ಸ್ಪರ್ಧಿಗಳು, ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದ್ದ ಐದು ಜನ ಇವರ ಜೊತೆಗೆ ಇನ್ನಿಳಿದ 9 ಜನ ಹೊಸಬರು ಈ ಶೋ ನಲ್ಲಿ ಇರಲಿದ್ದು ಸುದೀರ್ಘ ಶೋ ಇದಾಗಲಿದೆಯಂತೆ. ಸೆ.24 ರಂದು ಇದು ಗ್ರ್ಯಾಂಡ್ ಓಪನ್ ಆಗಲಿದ್ದು ನಿತ್ಯ 9.30 ಕ್ಕೆ ಬಿಗ್ ಬಾಸ್ ಆರಂಭ ಆಗಲಿದೆ. ಈ ಬಾರಿ ವಿಶೇಷವಾಗಿ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...