alex Certify ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಗ್‌ ಬಿʼ ಜೊತೆ ಹಾಟ್‌ ಸೀಟ್ ಹಂಚಿಕೊಳ್ಳಲಿರುವ ಒಲಿಂಪಿಕ್ ಚಾಂಪಿಯನ್ಸ್

ಜನಪ್ರಿಯ ರಿಯಾಲಿಟಿ ಶೋ ‌ʼಕೌನ್ ಬನೇಗಾ ಕ್ರೋರ್‌ಪತಿʼ (ಕೆಬಿಸಿ) ಹಾಟ್‌ಸೀಟ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹಾಗೂ ಪುರುಷರ ಹಾಕಿ ತಂಡದ ಪಿ.ಆರ್‌. ಶ್ರೀಜೇಶ್ ಕಾಣಿಸಿಕೊಳ್ಳಲಿದ್ದಾರೆ.

ಈ ಶೋನ ಟೀಸರ್‌ಅನ್ನು ಸೋನಿ ಟಿವಿ ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಈ ವಿಶೇಷ ಸಂಚಿಕೆ ಶುಕ್ರವಾರ ಬಿತ್ತರವಾಗಲಿದೆ.

ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಆರಂಭಿಕ ವೀರೇಂದ್ರ ಸೆಹ್ವಾಗ್ ಕೆಬಿಸಿ ಶೋ ಒಂದರಲ್ಲಿ ಕಾಣಿಸಿಕೊಂಡ ಬಳಿಕ ಈ ವಿನೂತನ ಸಂಚಿಕೆ ಮೂಡಿ ಬರುತ್ತಿದೆ.

ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಎಸೆತದಲ್ಲಿ ಬಂಗಾರದ ಸಾಧನೆಗೈದ ನೀರಜ್ ಚೋಪ್ರಾ, ಜಾಗತಿಕ ಕ್ರೀಡಾಕೂಟದ ಟ್ರಾಕ್ ಮತ್ತು ಫೀಲ್ಡ್‌ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇದೇ ಕೂಟದ ಪುರುಷರ ಹಾಕಿ ಸ್ಫರ್ಧೆಯಲ್ಲಿ ಕಂಚಿನ ಪದಕ ಜಯಿಸಿದ ಭಾರತ ತಂಡದ ಗೋಲ್ ಕೀಪರ್‌ ಶ್ರೀಜೇಶ್‌, ಕೂಟದಲ್ಲಿ ಚುರುಕಿನ ಆಟದ ಮೂಲಕ ಅನೇಕ ಸೇವ್‌ಗಳನ್ನು ಮಾಡಿ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. 41 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...