alex Certify ʼಡ್ರೈ ಪ್ರೂಟ್ಸ್ʼ ನಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ರೈ ಪ್ರೂಟ್ಸ್ʼ ನಿಂದ ಆರೋಗ್ಯ ಮಾತ್ರವಲ್ಲ ಸೌಂದರ್ಯವನ್ನೂ ವೃದ್ಧಿಸಿಕೊಳ್ಳಿ

9 Dry Fruits You Must Eat To Get Glowing Skin - lifeberrys.com

ಡ್ರೈ ಪ್ರೂಟ್ಸ್ ಗಳು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗೇ ಇದರಿಂದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹೌದು, ಡ್ರೈ ಪ್ರೂಟ್ಸ್ ಗಳನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ತೂಕ ಕೂಡ ಇಳಿಸಿಕೊಳ್ಳಬಹುದು.

ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…!

ಬಾದಾಮಿಯಲ್ಲಿ ವಿಟಮಿನ್ ಇ ಇರುವ ಕಾರಣ ಚರ್ಮಕ್ಕೆ ಯಾವಾಗಲೂ ತೇವಾಂಶ ನೀಡುವುದು. ಕೆಲವು ಬಾದಾಮಿಯನ್ನು ರಾತ್ರಿ ನೀರಿನಲ್ಲಿ ಹಾಕಿ ನೆನೆಸಿಡಬೇಕು. ಮೊದಲಿಗೆ ಬಾದಾಮಿಯ ಸಿಪ್ಪೆ ತೆಗೆದು, ಬಳಿಕ ಅದನ್ನು ಬಾಳೆಹಣ್ಣಿನ ಜೊತೆಗೆ ಸೇರಿಸಿಕೊಂಡು ರುಬ್ಬಿ ಪೇಸ್ಟ್ ಮಾಡಬೇಕು.

4-5 ನಿಮಿಷ ಕಾಲ ಈ ಮಿಶ್ರಣ ಬಳಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿಕೊಳ್ಳಿ. ಬಳಿಕ ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ. ಚರ್ಮದ ಸತ್ತಕೋಶವನ್ನು ಇದು ತೆಗೆಯುವುದು ಮತ್ತು ಚರ್ಮದಲ್ಲಿನ ಧೂಳು ಹಾಗೂ ಕಲ್ಮಷ ನಿವಾರಣೆ ಮಾಡಿ ಮುಖಕ್ಕೆ ಕಾಂತಿ ನೀಡುವುದು.

BIG NEWS: ಫೋರ್ಬ್ಸ್ ನಿಯತಕಾಲಿಕೆಯಲ್ಲಿ ಯಶ್‌ – ರಶ್ಮಿಕಾ

ನಾಲ್ಕು ವಾಲ್ ನಟ್ ನ್ನು ರುಬ್ಬಿಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಮಾಸ್ಕ್ ರೀತಿ ಹಚ್ಚಿಕೊಳ್ಳಿ. 10-15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಫ್ರಿಡ್ಜ್ ನಲ್ಲಿಟ್ಟಿರುವ ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮದ ಸತ್ತ ಕೋಶಗಳನ್ನು ತೆಗೆದುಹಾಕುವುದು ಮತ್ತು ವಯಸ್ಸಾಗುವಂತಹ ಲಕ್ಷಣಗಳು ಬರದಂತೆ ತಡೆಯುವುದು.

ಚರ್ಮದಲ್ಲಿರುವಂತಹ ವಿಷಕಾರಿ ಅಂಶವನ್ನು ತೆಗೆದುಹಾಕಲು ಒಣದ್ರಾಕ್ಷಿಯನ್ನು ನೇರವಾಗಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಕೆಲವು ಒಣದ್ರಾಕ್ಷಿಯನ್ನು ಪೇಸ್ಟ್ ಮಾಡಿಕೊಂಡು, ಅದಕ್ಕೆ ಸ್ವಲ್ಪ ಹಾಲು ಹಾಕಿ. ಈ ಪೇಸ್ಟ್ ನಿಂದ ಮುಖಕ್ಕೆ ಕೆಲವು ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ ಬಳಿಕ ನೀರಿನಿಂದ ತೊಳೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...