alex Certify ಹೇರ್ ಸ್ಪ್ರೇ ಬಳಸಿ ಈ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್ ಸ್ಪ್ರೇ ಬಳಸಿ ಈ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಿ….!

ಹುಡುಗಿಯರು ಕೂದಲು ಆಕರ್ಷಕವಾಗಿ ಕಾಣಲು ಕೇಶ ವಿನ್ಯಾಸಕ್ಕಾಗಿ ಹೇರ್ ಸ್ಪ್ರೇಯನ್ನು ಬಳಸುತ್ತಾರೆ. ಆದರೆ ಈ ಹೇರ್ ಸ್ಪ್ರೇ ಇನ್ನು ಹಲವು ಕೆಲಸಗಳಿಗೆ ಉಪಯೋಗವಾಗುತ್ತದೆ. ಅಂತಹ ಕೆಲಸಗಳು ಯಾವುದೆಂಬುದನ್ನು ತಿಳಿಯೋಣ.

*ಬೆಳ್ಳಿ ಮತ್ತು ಲೋಹದ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಹೇರ್ ಸ್ಪ್ರೇ ಸಿಂಪಡಿಸಿ ಬಟ್ಟೆಯಿಂದ ಉಜ್ಜಿ. ಇದರಿಂದ ಪಾತ್ರೆಗಳು ತಳತಳ ಹೊಳೆಯುತ್ತದೆ.

*ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವಾಗ ಅದು ನೆಲದ ಮೇಲೆ ಬಿದ್ದಾಗ ಅದನ್ನು ತಕ್ಷಣ ಒರೆಸಬೇಕು. ಇಲ್ಲವಾದರೆ ಅದು ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಈ ನೈಲ್ ಪಾಲಿಶ್ ಕಲೆಗಳನ್ನು ತೆಗೆಯಲು ಹೇರ್ ಸ್ಪ್ರೇ ಬಳಸಿ ಸ್ವಚ್ಛ ಮಾಡಬಹುದು.

ಲೆದರ್ ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಹೇಗೆ ಗೊತ್ತಾ….?

*ಮನೆಯ ಗೋಡೆಗಳ ಮೇಲೆ ಮಕ್ಕಳು ಇಂಕ್ ನಿಂದ ಬರೆದಿರುತ್ತಾರೆ ಅಥವಾ ಇಂಕ್ ಕಲೆ ಬಿದ್ದಿರುತ್ತದೆ. ಇದನ್ನು ಸುಲಭವಾಗಿ ತೆಗೆಯಲು ಹೇರ್ ಸ್ಪ್ರೇ ಸಿಂಪಡಿಸಿ ಒರೆಸಿದರೆ ಕಲೆ ಮಾಯವಾಗುತ್ತದೆ.

*ಚರ್ಮದ ಬೂಟುಗಳನ್ನು ಮತ್ತು ಲೆದರ್ ವಸ್ತುಗಳ ಮೆಲಿರುವ ಕಲೆಗಳನ್ನು ನಿವಾರಿಸಲು ಹೇರ್ ಸ್ಪ್ರೇ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...