alex Certify ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು…?

ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹೆಚ್ಚು ಸಂಕಟ, ನೋವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚು ರಕ್ತಸ್ರಾವದ ಸಮಸ್ಯೆ ಇರುತ್ತದೆ. ಹಾಗಾಗಿ ಈ ಅವಧಿಯಲ್ಲಿ ಮಹಿಳೆಯರು ಯಾವ ವ್ಯಾಯಾಮ ಮಾಡಬೇಕು? ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.

*ವಾಕಿಂಗ್ : ಅವಧಿಯ ವೇಳೆ ವಾಕಿಂಗ್ ಮಾಡಬಹುದು, ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ಅಡ್ಡಾಡಬಹುದು.

*ಓಡುವುದು: ಈ ಅವಧಿಯಲ್ಲಿ ಓಡಬಹುದು. ಆದರೆ ತುಂಬಾ ವೇಗವಾಗಿ ಓಡಬಾರದು, ಬದಲಾಗಿ ನಿಧಾನವಾಗಿ ಸ್ವಲ್ಪ ಹೊತ್ತು ಓಡುವುದರಿಂದ ಯಾವುದೇ ಸಮಸ್ಯೆ ಇಲ್ಲ.

* ಯೋಗ : ರಕ್ತಪರಿಚಲನೆಯನ್ನು ಹೆಚ್ಚಿಸುವ ಸುಲಭವಾದ ಯೋಗಗಳನ್ನು ಮಾಡಬಹುದು, ಗರ್ಭಾಶಯಕ್ಕೆ ಹೆಚ್ಚು ಒತ್ತಡ ಬೀಳುವಂತಹ ಯೋಗಗಳನ್ನು ಮಾಡಬೇಡಿ. ಹಾಗೇ ತಲೆ ಕೆಳಗಾದ ಯೋಗ ಭಂಗಿಗಳನ್ನು ಮಾಡಬೇಡಿ. ಇದರಿಂದ ನಿಮಗೆ ತುಂಬಾ ಸುಸ್ತಾಗಬಹುದು. ಮತ್ತು ರಕ್ತಸ್ರಾವ ಹೆಚ್ಚಾಗಬಹುದು.

*ಈಜು : ಈಜುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಇದು ಅವಧಿಯಲ್ಲಿ ಉಂಟಾಗುವ ಸೆಳೆತವನ್ನು ಕಡಿಮೆ ಮಾಡುತ್ತದೆ. ಆದರೆ ಅವಧಿಯ ವೇಳೆ ಟ್ಯಾಂಪೊನ್ ಬಳಸಿ ಈಜುವುದು ಉತ್ತಮ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...