alex Certify ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿ 54 ರಾಜ್ಯಸಭೆ ಸದಸ್ಯರು ನಿವೃತ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿ 54 ರಾಜ್ಯಸಭೆ ಸದಸ್ಯರು ನಿವೃತ್ತಿ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ 54 ರಾಜ್ಯಸಭೆ ಸದಸ್ಯರು ನಿವೃತ್ತರಾಗಲಿದ್ದಾರೆ. ಕೆಲವರ ಅವಧಿ ಮಂಗಳವಾರ, ಮತ್ತೆ ಕೆಲವರ ಅವಧಿ ಬುಧವಾರ ಮುಕ್ತಾಯವಾಗಿದೆ.

ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಮನ್ ಸುಖ್ ಮಾಂಡವಿಯ, ವಿ. ಮುರಳಿಧರನ್, ಭೂಪೇಂದ್ರ ಯಾದವ್, ನಾರಾಯಣ ರಾಣೆ, ಎಲ್. ಮುರುಗನ್ ನಿವೃತ್ತರಾಗಿದ್ದಾರೆ. ಅಶ್ವಿನಿ ವೈಷ್ಣವ್ ಮತ್ತು ಮುರುಗನ್ ಹೊರತಾಗಿ ಉಳಿದವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಆರ್.ಜೆ.ಡಿ.ಯ ಮನೋಜ್ ಕುಮಾರ್ ಝಾ, ಕಾಂಗ್ರೆಸ್ ನ ನಾಸಿರ್ ಹುಸೇನ್, ಅಭಿಷೇಕ್ ಸಿಂಘ್ವಿ ನಿವೃತ್ತರಾಗಿದ್ದಾರೆ. ಇವರಲ್ಲಿ ಕೆಲವರು ಮರಳಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಸುದೀರ್ಘ 33 ವರ್ಷಗಳಿಂದ ರಾಜ್ಯಸಭೆ ಸದಸ್ಯರಾಗಿದ್ದ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಮಂಗಳವಾರಕ್ಕೆ ಮುಕ್ತಾಯವಾಗಿದೆ. 1991ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಅವರು ರಾಜ್ಯಸಭೆ ಸದಸ್ಯರಾಗಿದ್ದರು. ನರಸಿಂಹರಾವ್ ಅವರ ಸರ್ಕಾರದಲ್ಲಿ 1991 ರಿಂದ 96ರ ವರೆಗೆ ಹಣಕಾಸು ಸಚಿವರಾಗಿದ್ದರು. 2004 ರಿಂದ 14ರ ವರೆಗೆ ಪ್ರಧಾನಿಯಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...