alex Certify ಎಂದಾದರೂ ಚಿಪ್ಸ್​ನಿಂದ ಆಲೂ ತಯಾರಿಸಿದ್ದೀರಾ….? ಇಲ್ಲ ಅಂದ್ರೆ ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂದಾದರೂ ಚಿಪ್ಸ್​ನಿಂದ ಆಲೂ ತಯಾರಿಸಿದ್ದೀರಾ….? ಇಲ್ಲ ಅಂದ್ರೆ ಈ ವಿಡಿಯೋ ನೋಡಿ

ಚಾಕಲೇಟ್​​ ಮಂಚೂರಿಯಿಂದ ಹಿಡಿದು ಖಾರ ಜಿಲೆಬಿಯವರೆಗೆ ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಬಗೆಯ ತಿಂಡಿಗಳು ಸುದ್ದಿಯಾಗುತ್ತಲೇ ಇರುತ್ತೆ. ಇದೀಗ ಈ ಸಾಲಿಗೆ ಇನ್ನೊಂದು ವಿಚಿತ್ರವಾದ ತಿನಿಸು ಸೇರಿದೆ.

ಟಿಕ್​ಟಾಕ್​ನಲ್ಲಿ ವೈರಲ್​ ಆದ ವಿಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬ ಆಲೂಗಡ್ಡೆ ಚಿಪ್ಸ್ ನೀರಿನಲ್ಲಿ ಕುದಿಸಿ ಅದರ ನೀರನ್ನ ತೆಗೆದು ಹಿಸುಕಿದ ಆಲೂಗಡ್ಡೆಯನ್ನ ತಯಾರಿಸಿದ್ದಾನೆ.

ಸಾಮಾನ್ಯವಾಗಿ ಆಲೂಗಡ್ಡೆಯಲ್ಲಿ ನೀರಿನಲ್ಲಿ ಬೇಯಿಸಿ ಬಳಿಕ ಅದನ್ನ ಹಿಸುಕಲಾಗುತ್ತೆ. ಆದರೆ ತನ್ನನ್ನ ತಾನು ಅತ್ಯುತ್ತಮ ಬಾಣಸಿಗ ಎಂದು ಕರೆದುಕೊಳ್ಳುವ ಈತ ಚಿಪ್ಸ್​ನ್ನ ಬಳಸಿ ಆಲಗಡ್ಡೆಯನ್ನೇ ತಯಾರಿಸಿಬಿಟ್ಟಿದ್ದಾನೆ. ಒಂದು ಪಾತ್ರೆಯಲ್ಲಿ ನೀರು, ಉಪ್ಪು ಹಾಗೂ ವಿನೇಗರ್​ನ್ನು ಸೇರಿಸಿ ಅದು ಕುದಿಯಲು ಆರಂಭಿಸಿದ ಬಳಿಕ ಚಿಪ್ಸ್​ನ್ನು ಹಾಕಿದ್ದಾನೆ.

ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ

ಬಳಿಕ ಬೆಂದ ಚಿಪ್ಸ್​ಗಳನ್ನ ಹಿಂಡಿ ಆ ನೀರನ್ನ ಕುಡಿಯುತ್ತಾನೆ. ಅಲ್ಲದೇ ಬೆಂದ ಆಲೂಗಡ್ಡೆ ಚಿಪ್ಸ್​ನ್ನೂ ತಿನ್ನುತ್ತಾನೆ. ಈ ವಿಚಿತ್ರವನ್ನ ಕಂಡ ನೆಟ್ಟಿಗರು ಯಾವ ವಿಡಿಯೋ ನೋಡಿಯೂ ನಮ್ಮ ಹೊಟ್ಟೆ ಇಷ್ಟರ ಮಟ್ಟಿಗೆ ಹಾಳಾಗಿರಲಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಇಷ್ಟೆಲ್ಲ ಸಾಹಸ ಮಾಡುವ ಬದಲು ಅಂಗಡಿಗೆ ಹೋಗಿ ಆಲೂಗಡ್ಡೆಯನ್ನೇ ಖರೀದಿ ಮಾಡು. ಚಿಪ್ಸ್​ಗಿಂತ ಅಗ್ಗದ ದರದಲ್ಲಿ ಆಲೂಗಡ್ಡೆಯೇ ಸಿಗುತ್ತೆ ಎಂದು ಸಲಹೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...