alex Certify ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

rsz_11shutterstock_1257990970

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ ಮುಂದೆ ಸಮಸ್ಯೆಯಾಗುತ್ತದೆ.

ಕೊರೊನಾ ಹಿನ್ನಲೆಯಲ್ಲಿ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಳದ ಮಧ್ಯೆಯೇ ಜನರು ಸಾಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದಾರೆ. ಮಕ್ಕಳಿಗೆ ಲಸಿಕೆ ಬಾಕಿಯಿದ್ರೆ ಈ ಸಮಯದಲ್ಲಿ ಲಸಿಕೆ ಹಾಕಿಸುವುದು ಸೂಕ್ತ.

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿಯ ಪ್ರಕಾರ, ಕನಿಷ್ಠ 80 ದಶಲಕ್ಷ ಮಕ್ಕಳಿಗೆ ಡಿಫ್ತಿರಿಯಾ, ದಡಾರ ಮತ್ತು ಪೋಲಿಯೊ ಮುಂತಾದ ಕಾಯಿಲೆಗಳ ಲಸಿಕೆ ಹಾಕಲಾಗುತ್ತದೆ. ಈ ಲಸಿಕೆಗಳು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ಕೆಲವು ಸಾಮಾನ್ಯ ಮತ್ತು ಕೆಲವು ಗಂಭೀರ ಕಾಯಿಲೆಗಳಿಂದ ಮಕ್ಕಳನ್ನು ಲಸಿಕೆಗಳು ರಕ್ಷಿಸುತ್ತವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಆರೋಗ್ಯಕರ ಆಹಾರದ ಜೊತೆಗೆ ವ್ಯಾಕ್ಸಿನೇಷನ್ ಹಾಕಿಸಬೇಕು. ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಲು ಕೋಷ್ಠಕ ರಚಿಸಿ. ವೈದ್ಯರ ಸಲಹೆ ಪಡೆದು ಕೋಷ್ಠಕ ಸಿದ್ಧಪಡಿಸಿ. ಯಾವ ಸಮಯದಲ್ಲಿ ಯಾವ ಲಸಿಕೆ ಹಾಕಬೇಕೆಂಬುದನ್ನು ಅಲ್ಲಿ ಬರೆದಿಟ್ಟರೆ ನಿಮಗೆ ಲಸಿಕೆ ಮರೆಯುವುದಿಲ್ಲ.

ಈ ಸಮಯದಲ್ಲಿ ನಂಬಿಕೆಯ ವೈದ್ಯರನ್ನು ಭೇಟಿಯಾಗಿದೆ. ಮಾಸ್ಕ್, ಗ್ಲೌಸ್ ಧರಿಸುವುದನ್ನು ಮರೆಯಬೇಡಿ. ಆಸ್ಪತ್ರೆಯಲ್ಲಿ ಎಚ್ಚರಿಕೆ ತೆಗೆದುಕೊಳ್ಳಿ. ಆದ್ರೆ ಕೊರೊನಾ ಭಯಕ್ಕೆ ಲಸಿಕೆ ಮರೆಯಬೇಡಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...