alex Certify ಬಟ್ಟೆಗಿಂತ ಈ ಮಾಸ್ಕ್ ಸುರಕ್ಷಿತ: ಎನ್ 95 ಮಾಸ್ಕ್ ಗಳ ಬಳಕೆಗೆ ಸಲಹೆ ನೀಡಿದ ಸಿಡಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆಗಿಂತ ಈ ಮಾಸ್ಕ್ ಸುರಕ್ಷಿತ: ಎನ್ 95 ಮಾಸ್ಕ್ ಗಳ ಬಳಕೆಗೆ ಸಲಹೆ ನೀಡಿದ ಸಿಡಿಸಿ

ಓಮಿಕ್ರಾನ್​ ರೂಪಾಂತರಿ ಹೆಚ್ಚುತ್ತಿರುವ ನಡುವೆಯೇ ಆರೋಗ್ಯ ತಜ್ಞರು ಬಟ್ಟೆಯ ಮಾಸ್ಕ್​​ಗಳ ಬದಲಾಗಿ ಎನ್​ 95 ಅಥವಾ ಕೆಎನ್​ 95 ಮಾಸ್ಕ್​​​ಗಳನ್ನೇ ಧರಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

ಹಾಗಾದರೆ ಬಟ್ಟೆಯ ಮಾಸ್ಕ್​ ಏಕೆ ಸುರಕ್ಷಿತವಲ್ಲ..? ಬಟ್ಟೆಯ ಮಾಸ್ಕ್​ಗಳಿಗಿಂತ ಎನ್​ 95 ಮಾಸ್ಕ್​ಗಳಲ್ಲಿ ಇರುವ ವಿಶೇಷತೆ ಏನು ಇಲ್ಲಿದೆ ಮಾಹಿತಿ :
ಕೊರೊನಾದ ಓಮಿಕ್ರಾನ್​ ರೂಪಾಂತರಿಯು ಕೋವಿಡ್​ ಮೂರನೆ ಅಲೆಗೆ ಕಾರಣವಾಗಿರುವುದು ಮಾತ್ರವಲ್ಲದೇ ಈ ಹಿಂದೆ ಯಾವುದೇ ರೂಪಾಂತರಿಯು ಹರಡದಷ್ಟು ವೇಗದಲ್ಲಿ ಹರಡುತ್ತಿದೆ. ಅತಿಯಾದ ಜನದಟ್ಟಣೆ ಇರುವ ಸ್ಥಳಗಳಲ್ಲಿ ಓಮಿಕ್ರಾನ್​ ರೂಪಾಂತರಿಯ ಆತಂಕವು ಇನ್ನಷ್ಟು ಹೆಚ್ಚಿರುತ್ತದೆ.

ಇತ್ತೀಚೆಗಷ್ಟೇ ಅಮೆರಿಕದ ರೋಗ ನಿಯಂತ್ರಣ ಕೇಂದ್ರವು ಆರೋಗ್ಯ ಕಾರ್ಯಕರ್ತರು ಬಳಕೆ ಮಾಡುವ ಫೇಸ್​ ಮಾಸ್ಕ್​ಗಳ ಬಗ್ಗೆ ತನ್ನ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಿದೆ. ಅಲ್ಲದೇ ಮುಖಕ್ಕೆ ಸರಿಯಾಗಿ ಫಿಟ್​ ಆಗುವಂತಹ ಮಾಸ್ಕ್​ಗಳನ್ನೇ ಧರಿಸಬೇಕು ಎಂದು ಸಹ ಹೇಳಿದೆ.

ಯಾವುದೇ ಮಾಸ್ಕ್​ ಧರಿಸದೇ ಇರುವುದಕ್ಕಿಂತ ಯಾವುದಾದರೊಂದು ಮಾಸ್ಕ್​ ಧರಿಸುವುದು ಉತ್ತಮ ಎಂಬುದು ನಮ್ಮ ಮುಖ್ಯ ಸಂದೇಶವಾಗಿದೆ ಎಂದು ಸಿಡಿಸಿ ವಕ್ತಾರ ಕ್ರಿಸ್ಟನ್​ ನೋರ್ಡ್​ಲಂಡ್​​ ಹೇಳಿದ್ದಾರೆ.

ಈ ಮೊದಲು ಕಡಿಮೆ ಉತ್ಪಾದನೆ ಹಿನ್ನೆಲೆಯಲ್ಲಿ ಎನ್​ 95 ಮಾಸ್ಕ್​ ಕೇವಲ ಆರೋಗ್ಯ ಸಿಬ್ಬಂದಿ ಮಾತ್ರ ಬಳಕೆ ಮಾಡಬೇಕು ಎಂದು ಹೇಳಿದ್ದರು. ಸರ್ಜಿಕಲ್​ ಎನ್​ 95 ಎಂಬ ವಿಶೇಷವಾದ ಮಾಸ್ಕ್​ ಒಂದಿದ್ದು, ಇದನ್ನು ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ನೀಡಲಾಗುತ್ತಿತ್ತು. ಈ ವ್ಯವಸ್ಥೆಯು ಇದೇ ರೀತಿ ಮುಂದುವರಿಯಲಿದೆ ಎಂದು ಸಿಡಿಸಿ ಹೇಳಿದೆ.

ಎನ್​ 95 ಮಾಸ್ಕ್​ ಎಷ್ಟು ಸುರಕ್ಷಿತ..?
ಬಟ್ಟೆಯ ಮಾಸ್ಕ್​ಗಳಿಗಿಂತ ಎನ್​ 95 ಮಾಸ್ಕ್​ಗಳನ್ನು ನಿಮ್ಮ ಮುಖದ ಅಳತೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಅಲ್ಲದೇ ವೈರಾಣುಗಳು ಮೂಗನ್ನು ಪ್ರವೇಶಿಸದಂತೆ ತಡೆಯಲು ವಿಶೇಷವಾದ ಪದರವನ್ನು ಎನ್​ 95 ಮಾಸ್ಕ್​ಗಳಲ್ಲಿ ಅಳವಡಿಸಲಾಗಿರುತ್ತದೆ.

ಬಟ್ಟೆ ಮಾಸ್ಕ್​ಗಳಿಗೆ ಹೋಲಿಕೆ ಮಾಡಿದರೆ ಎನ್​ 95 ಮಾಸ್ಕ್​ಗಳಲ್ಲಿ ರಂಧ್ರಗಳು ಅತ್ಯಂತ ಚಿಕ್ಕದಾಗಿ ಇರುತ್ತದೆ. ಹೀಗಾಗಿ ಯಾವುದೇ ರೀತಿಯ ಸೂಕ್ಷ್ಮಾತಿ ಸೂಕ್ಷ್ಮ ಜೀವಿಗಳು ಒಳಗೆ ಹೋಗುವುದಿಲ್ಲ.

ಎನ್​ 95 ಮಾಸ್ಕ್​ಗಳಂತೆಯೇ ಕೆಎನ್​ 95 ಹಾಗೂ ಕೆಎಫ್​​94 ಎಸ್​ ಮಾಸ್ಕ್​ಗಳು ಕೂಡ ವೈರಾಣುಗಳ ವಿರುದ್ಧ ಉತ್ತಮ ರಕ್ಷಣೆಯನ್ನು ನೀಡುತ್ತವೆ ಎಂದು ಸಿಡಿಸಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...