alex Certify ಹುಬ್ಬಳ್ಳಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತ್ಯಂತ ಉದ್ದದ ರೈಲ್ವೇ ಪ್ಲಾಟ್ ‌ಫಾರಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬಳ್ಳಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತ್ಯಂತ ಉದ್ದದ ರೈಲ್ವೇ ಪ್ಲಾಟ್ ‌ಫಾರಂ…!

ದಕ್ಷಿಣ ಭಾರತದಲ್ಲಿ ಅತ್ಯಂತ ಬ್ಯುಸಿ ರೈಲ್ವೇ ನಿಲ್ದಾಣಗಳಲ್ಲಿ ಒಂದಾದ ಹುಬ್ಬಳ್ಳಿ ನಿಲ್ದಾಣದಲ್ಲಿ ನಿರ್ಮಿಸಲಾದ ಜಗತ್ತಿನ ಅತ್ಯಂತ ಉದ್ದವಾದ ಪ್ಲಾಟ್‌ಫಾರಂ ಅನ್ನು ಶೀಘ್ರವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಒಂದೂವರೆ ತಿಂಗಳ ಒಳಗೆ ಈ ಪ್ಲಾಟ್‌ಫಾರಂ ನಿರ್ಮಾಣ ಪೂರ್ಣಗೊಳ್ಳಲಿದ್ದು, ಪ್ರಧಾನಿ ಅವರು ಆನ್ಲೈನ್‌ ಮೂಲಕ ರಿಮೋಟ್‌ ಆಗಿ ಉದ್ಘಾಟನೆ ಮಾಡಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

ಎಲ್ಲೆಂದರಲ್ಲಿ ಉಗುಳುವ ಕೆಟ್ಟ ಚಟವನ್ನು ನಿಯಂತ್ರಿಸಲು ಮುಂದಾಗಿರುವ ಯಂಗ್ ಇಂಡಿಯಾ ಎನ್‌ಜಿಓನ ಅಭಿಯಾನಕ್ಕೆ ಚಾಲನೆ ಕೊಟ್ಟು ಮಾತನಾಡಿದ ಜೋಶಿ, “ಯಂಗ್ ಇಂಡಿಯಾದ ಹುಬ್ಬಳ್ಳಿ-ಧಾರವಾಡ ಘಟಕವು ಈ ನಿಟ್ಟಿನಲ್ಲಿ ಮಾಡಿರುವ ಕೆಲಸ ಸ್ಮರಣೀಯವಾಗಿದೆ. ಉಗುಳುವುದು ಬಹಳ ಕೆಟ್ಟ ಅಭ್ಯಾಸವಾಗಿದ್ದು ಅನ್ಯರಿಗೂ ತೊಂದರೆ ಕೊಡುತ್ತದೆ. ಉತ್ತರ ಕರ್ನಾಟಕದಲ್ಲಿ ಜನರು ಹೊಗೆ ಸೊಪ್ಪು ಹಾಗು ಗುಟ್ಕಾ ಅಗಿದು ಎಲ್ಲೆಂದರಲ್ಲಿ ಉಗುಳುತ್ತಾರೆ. ಹೀಗಾಗಿ ಉಗುಳುವುದಕ್ಕೆ ಎಂದೇ ಪ್ರತ್ಯೇಕ ಡಬ್ಬಗಳನ್ನು ಇಡುವ ಯಂಗ್ ಇಂಡಿಯಾ ಅಭಿಯಾನ ಶ್ಲಾಘನಾರ್ಹ” ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...