alex Certify ಗ್ರಾಹಕರಿಗೆ ಗುಡ್ ನ್ಯೂಸ್: ಟೊಮೆಟೊ, ಬೀನ್ಸ್ ದರ ಭಾರಿ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಗುಡ್ ನ್ಯೂಸ್: ಟೊಮೆಟೊ, ಬೀನ್ಸ್ ದರ ಭಾರಿ ಕುಸಿತ

ಬೆಂಗಳೂರು: ಟೊಮೆಟೊ, ಬೀನ್ಸ್ ದರ ಕುಸಿತ ಕಂಡಿದ್ದು ಕೆಜಿಗೆ ತಲಾ 20 ರೂ.ಗೆ ಮಾರಾಟವಾಗುತ್ತಿದೆ. ಗ್ರಾಹಕರು ಖುಷಿಯಾಗಿದ್ದರೆ, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ 40 ರೂ. ಇದ್ದ ಬೀನ್ಸ್ ದರ 20 ರೂಪಾಯಿ ಮಾರಾಟವಾಗುತ್ತಿದೆ. ಟೊಮೆಟೊ ದರ ಕೂಡ ಕುಸಿತ ಕಂಡಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ 15 ಕೆಜಿ ಬಾಕ್ಸ್ ನ ಟೊಮೆಟೊ ದರ 2000 ರೂ.ವರೆಗೆ ಏರಿಕೆಯಾಗಿತ್ತು. ಪ್ರಸ್ತುತ ಗರಿಷ್ಠ 100 ರೂ.ವರೆಗೆ ಮಾರಾಟವಾಗುತ್ತಿದೆ.

ಬೆಲೆ ಕುಸಿತವಾಗಿ ಗ್ರಾಹಕರಿಗೆ ಸಂತಸ ತಂದಿದ್ದರೆ, ಬೆಳೆಗಾರರಿಗೆ ಬರೆ ಎಳೆದಂತಾಗಿದೆ. ಕಳೆದ ಒಂದು ತಿಂಗಳಿಂದ ತರಕಾರಿ ದರ ಕಡಿಮೆಯಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಟೊಮೆಟೊ, ಬೀನ್ಸ್ ಸೇರಿದಂತೆ ತರಕಾರಿ ಬರುತ್ತಿದ್ದು, ದರ ಕುಸಿತಕ್ಕೆ ಕಾರಣ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...