alex Certify ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಹೀರಾತಿನ ಮೂಲಕ ವೀಕ್ಷಕರ ಮನ ಗೆದ್ದ ಭೀಮಾ ಜ್ಯೂವೆಲರ್ಸ್​..!

ಕೇರಳ ಮೂಲದ ಆಭರಣ ಮಳಿಗೆಯೊಂದು ತನ್ನ ಹೊಸ ಜಾಹೀರಾತಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನ ಗಳಿಸುತ್ತಿದೆ. ಕೊಚ್ಚಿಯ ಭೀಮಾ ಜ್ಯುವೆಲರ್ಸ್​ ಯುವಕನೊಬ್ಬ ಹೆಣ್ಣಾಗಿ ಪರಿವರ್ತನೆಗೊಳ್ಳುವ ಸಾರಾಂಶವನ್ನ ಇಟ್ಟುಕೊಂಡು ಈ ಜಾಹೀರಾತನ್ನ ಹೆಣೆದಿದೆ.

ಇದರಲ್ಲಿ ಮಹಿಳೆಯ ಗುಣವನ್ನ ಹೊಂದಿದ್ದ ಯುವಕನೊಬ್ಬ ಪೋಷಕರ ನೆರವಿನಿಂದ ಆತ್ಮವಿಶ್ವಾಸವುಳ್ಳ ಮಹಿಳೆಯಾಗಿ ಪರಿವರ್ತನೆಯಾಗಿದ್ದು ಮಾತ್ರವಲ್ಲದೇ ಮದುವೆಗೆ ತಯಾರಾಗುತ್ತಾರೆ.

ಈ ಜಾಹೀರಾತಿನಲ್ಲಿ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಯುವಕನ ಮನಸಲ್ಲಿ ನಡೆಯುವ ಪ್ರತಿಯೊಂದು ತುಮುಲಗಳನ್ನ ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ.

ಲಿಂಗ ಪರಿವರ್ತನೆ ಮಾಡಿಕೊಂಡ ಯುವಕನಿಗೆ ಪೋಷಕರು ಹಾಗೂ ಅಜ್ಜಿ ತಾತಂದಿರು ಚಿನ್ನದ ಆಭರಣಗಳನ್ನ ಉಡುಗೊರೆ ರೂಪದಲ್ಲಿ ನೀಡ್ತಾರೆ. ಈ ಜಾಹಿರಾತಿನಲ್ಲಿ ಲಿಂಗ ಪರಿವರ್ತಿತ ಮಹಿಳೆ ಮೀರಾ ಸಿಂಘಾನಿಯಾ ನಟಿಸಿದ್ದಾರೆ.

ಈ ಜಾಹಿರಾತಿನ ವಿಡಿಯೋ ಯುಟ್ಯೂಬ್​ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚಿಗೆ ಗಳಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...