alex Certify ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಗುಡ್ ನ್ಯೂಸ್: ಇಳಿಕೆಯಾದ ಈರುಳ್ಳಿ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಗುಡ್ ನ್ಯೂಸ್: ಇಳಿಕೆಯಾದ ಈರುಳ್ಳಿ ದರ

ಬೆಂಗಳೂರು: ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೂರು ದಿನದಿಂದ ಯಶವಂತಪುರ ಎಪಿಎಂಸಿಗೆ ಈರುಳ್ಳಿ ಪೂರೈಕೆ ಹೆಚ್ಚಾಗಿದ್ದು, ಏರುಗತಿಯಲ್ಲಿದ್ದ ಈರುಳ್ಳಿ ಬೆಲೆ ಕೊಂಚ ಕಡಿಮೆಯಾಗಿದೆ. ಈರುಳ್ಳಿ ಪೂರೈಕೆ ಇದೇ ರೀತಿ ಮುಂದುವರೆದರೆ ಮೂರ್ನಾಲ್ಕು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಈರುಳ್ಳಿ ದರ ಕಡಿಮೆಯಾಗಲಿದೆ.

ಕಳೆದ ಒಂದು ತಿಂಗಳಿಂದ ಯಶವಂತಪುರ ಎಪಿಎಂಸಿಗೆ 50 ಕೆಜಿಯ ಸುಮಾರು 60 ಸಾವಿರ ಚೀಲ ಬರುತ್ತಿತ್ತು. ಹೀಗಾಗಿ ಈರುಳ್ಳಿ ಸಗಟು ದರ ಕೆಜಿಗೆ 60 ರಿಂದ 70 ರೂಪಾಯಿವರೆಗೆ ಏರಿಕೆಯಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 100 ರೂ ದಾಟಿತ್ತು.

ಕಳೆದ ಮೂರು ನಾಲ್ಕು ದಿನಗಳಿಂದ ಈರುಳ್ಳಿ ಪೂರೈಕೆ ಹೆಚ್ಚಾಗಿದೆ. ಸುಮಾರು 80,000 ಚೀಲ ಮಾರುಕಟ್ಟೆಗೆ ಬರುತ್ತಿದ್ದು, ಸಗಟು ದರ ಕೆಜಿಗೆ 50 ರಿಂದ 55 ರೂ. ಆಗಿದೆ. ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆದಲ್ಲಿ ಮೂರ್ನಾಲ್ಕು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...