alex Certify ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಒಂದೇ ದಿನ 1088 ರೂ. ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಒಂದೇ ದಿನ 1088 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಒಂದೇ ದಿನ 1088 ರೂ. ಏರಿಕೆಯಾಗಿದೆ.

10 ಗ್ರಾಂ ಗೆ 1088 ರೂಪಾಯಿ ಏರಿಕೆಯಾಗಿದ್ದು, 51,458 ರೂಪಾಯಿಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 411 ರೂಪಾಯಿ ಕಡಿಮೆಯಾಗಿದ್ದು 58,159 ರೂ.ಗೆ ತಲುಪಿದೆ.

ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15 ರಷ್ಟು ಹೆಚ್ಚಳ ಮಾಡಿದೆ. ಮೂಲ ಕಸ್ಟಮ್ಸ್ ಸುಂಕ ಶೇಕಡ 7.5 ರಷ್ಟು ಇದ್ದು, ಅದು 12.5 ಕ್ಕೆ ಹೆಚ್ಚಾಗಿದೆ. ಶೇಕಡ 2.5 ರಷ್ಟು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಸೇರ್ಪಡೆಯಾಗುವುದರಿಂದ ಚಿನ್ನದ ಮೇಲಿನ ಒಟ್ಟು ಸಂಕ ಶೇಕಡ 15 ರಷ್ಟು ಆಗಲಿದೆ. ಚಿನ್ನದ ಆಮದು ಪ್ರಮಾಣ ಭಾರಿ ಏರಿಕೆ ಕಂಡಿದ್ದು, ಕಳೆದ ಮೇನಲ್ಲಿ 107 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...