alex Certify BIG NEWS: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್ ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇವಲ 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್ ಕಾರ್ಡ್

ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಸುಲಭವಾಗಿ ಇ-ಪಾನ್ ಪಡೆಯಬಹುದು. ವಿಶೇಷವೆಂದರೆ ಈಗ ಕೇವಲ 10 ನಿಮಿಷಗಳಲ್ಲಿ ಪಾನ್  ಕಾರ್ಡ್ ಸಿದ್ಧವಾಗುತ್ತದೆ.  ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು, ಬ್ಯಾಂಕ್ ಖಾತೆ ತೆರೆಯಲು, ಡಿಮ್ಯಾಟ್ ಖಾತೆ ತೆರೆಯಲು ಅಥವಾ ಇನ್ನಾವುದೇ ಅವಶ್ಯಕತೆಗೆ ಪಾನ್ ಕಡ್ಡಾಯವಾಗಿದೆ.

ಮೊದಲು ಆದಾಯ ತೆರಿಗೆ ಇಲಾಖೆಯಿಂದ ಪ್ಯಾನ್ ಕಾರ್ಡ್ ಪಡೆಯಲು  ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ Instant PAN through Aadhaar ಕ್ಲಿಕ್ ಮಾಡಿ. ನಂತರ Get New PAN ಆಯ್ಕೆ ಮಾಡಿ. ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿ ಮೌಲ್ಯಮಾಪನದ ನಂತರ ಇ-ಪಾನ್ ನಿಮಗೆ ನೀಡಲಾಗುತ್ತದೆ.

ಇದರಲ್ಲಿ ಅರ್ಜಿದಾರನು ಪಿಡಿಎಫ್ ರೂಪದಲ್ಲಿ ಪಾನ್ ಕಾರ್ಡ್‌ನ ನಕಲನ್ನು ಪಡೆಯುತ್ತಾನೆ. ಅದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಈ ಕ್ಯೂಆರ್ ಕೋಡ್ ಅರ್ಜಿದಾರರ ವಿವರಗಳು ಮತ್ತು ಫೋಟೋವನ್ನು ಒಳಗೊಂಡಿದೆ. ಅರ್ಜಿ ಸಲ್ಲಿಸುವ ಸಮಯದಲ್ಲಿ, 15 ಅಂಕಿಯ ಸಂಖ್ಯೆಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ಸಂಖ್ಯೆಯ ಸಹಾಯದಿಂದ ಇ-ಪಾನ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ನಕಲನ್ನು ಅಪ್ಲಿಕೇಶನ್‌ನ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಆಧಾರ್‌ನಲ್ಲಿ ಇಮೇಲ್ ಐಡಿ ನೋಂದಾಯಿಸಿಕೊಳ್ಳುವುದು ಕಡ್ಡಾಯ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...