alex Certify ನಿಮ್ಮನ್ನು ಅಚ್ಚರಿಗೊಳಿಸುತ್ತೆ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಅಚ್ಚರಿಗೊಳಿಸುತ್ತೆ ಬೌನ್ಸ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬೆಲೆ

ಭಾರತದಲ್ಲಿ ಎಲೆಕ್ಟ್ರಿಕ್​​ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಸಾಕಷ್ಟು ಸ್ಟಾರ್ಟ್​ ಅಪ್​ ಕಂಪನಿಗಳು ಎಲೆಕ್ಟ್ರಿಕ್​ ಮೊಬಿಲಿಟಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಪ್ರೇರಣೆ ನೀಡುತ್ತಿದೆ.

ಓಲಾ ಕಂಪನಿಯ ಎಲೆಕ್ಟ್ರಿಕ್​ ಬೈಕುಗಳಿಗೆ ಬೇಡಿಕೆ ಹೆಚ್ಚುತ್ತಿರೋದನ್ನು ನಾವು ಈಗಾಗಲೇ ಕಂಡಿದ್ದೇವೆ. ಈ ನಡುವೆ ಬೌನ್ಸ್​ ಕಂಪನಿಯ ಕೂಡ ಭಾರತದಲ್ಲಿ ಬೌನ್ಸ್​ ಇನ್ಫಿನಿಟಿ ಎಲೆಕ್ಟ್ರಿಕ್​ ಸ್ಕೂಟರ್​ಗಳಿಗೆ 79,999 ರೂಪಾಯಿ ದರ ನಿಗದಿ ಮಾಡಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಸಿಗುವ ಇವಿ ಸಬ್ಸಿಡಿ ಬಳಿಕ ಈ ಬೈಕುಗಳ ಬೆಲೆಯು 59,999 ರೂಪಾಯಿಗಳಷ್ಟಾಗಲಿದೆ. ಬ್ಯಾಟರಿ ಹಾಗೂ ಚಾರ್ಜರ್​ ಸಮೇತ ಬೈಕುಗಳಿಗೆ ದರ ನಿಗದಿ ಮಾಡಲಾಗಿದೆ.

ಒಂದು ವೇಳೆ ನೀವು ಬ್ಯಾಟರಿ ಸೇವೆಯ ಆಯ್ಕೆಯನ್ನು ಆರಿಸಿಕೊಂಡಲ್ಲಿ ಸ್ಕೂಟರ್​ನ ಬೆಲೆಯು ಸುಮಾರು 36 ಸಾವಿರ ರೂಪಾಯಿ ಆಗಿರಲಿದೆ. ಅಂದರೆ ಇಲ್ಲಿ ನೀವು ಬ್ಯಾಟರಿಗಳನ್ನು ಖರೀದಿಸದೇ ಸ್ಕೂಟರ್​ನ್ನು ಖರೀದಿ ಮಾಡಬೇಕು. ಬಳಿಕ ಆ ಗ್ರಾಹಕರು ಕಂಪನಿಯಿಂದ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಈ ಆಯ್ಕೆಯು ಸಂಪೂರ್ಣ ಗ್ರಾಹಕರ ಮೇಲೆ ಅವಲಂಬಿತವಾಗಿರಲಿದೆ ಎಂದು ಕಂಪನಿ ಹೇಳಿದೆ.

ಬೌನ್ಸ್​ ಇನ್ಫಿನಿಟಿಯು ಸ್ವ್ಯಾಪ್​ ಮಾಡಬಹುದಾದ ಬ್ಯಾಟರಿಯೊಂದಿಗೆ ಬರುತ್ತದೆ. ಪ್ರಾರಂಭಿಕ ಹಂತದಲ್ಲಿ 3500ಕ್ಕೂ ಅಧಿಕ ಸ್ಥಳಗಳಲ್ಲಿ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಪಾರ್ಕ್​ ಪ್ಲಸ್​ನೊಂದಿಗೆ ಬೌನ್ಸ್​ ಪಾಲುದಾರಿಕೆ ಹೊಂದಿದೆ. ಅಂದರೆ ನೀವು ಸ್ವಾಪಿಂಗ್​ ಸ್ಟೇಷನ್​ಗಳಲ್ಲಿ ಬ್ಯಾಟರಿ ಬಾಡಿಗೆಗೆ ಪಡೆದು ಖಾಲಿಯಾದ ಬಳಿಕ ಅದನ್ನು ಚಾರ್ಜ್​ ಮಾಡಲಾದ ಬ್ಯಾಟರಿಯೊಂದಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಅಂದಹಾಗೆ ಈ ಸೇವೆಯು ಗ್ರಾಹಕರಿಗೆ ಉಚಿತವಾಗಿ ಸಿಗೋದಿಲ್ಲ ಎಂಬ ಅಂಶವು ನೆನಪಿನಲ್ಲಿಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...