alex Certify ಕ್ರೆಡಿಟ್ ಕಾರ್ಡ್ ರದ್ದಾದರೂ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ 60 ಸಾವಿರ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೆಡಿಟ್ ಕಾರ್ಡ್ ರದ್ದಾದರೂ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ 60 ಸಾವಿರ ರೂ. ದಂಡ

ಅಹಮದಾಬಾದ್: ಕ್ರೆಡಿಟ್ ಕಾರ್ಡ್ ರದ್ದುಮಾಡಿ ಮೂರು ವರ್ಷಗಳವರೆಗೂ ಸಾಲದ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ ಗುಜರಾತ್ ರಾಜ್ಯ ಗ್ರಾಹಕರ ನ್ಯಾಯಾಲಯ 60. ಸಾವಿರ ರೂ. ದಂಡ ವಿಧಿಸಿದೆ.

ತಲತೇಜ್ ನಿವಾಸಿ ದೇವನ್ ಡಾಂಗಿ ಎಂಬುವವರು ಹೂಡಿದ್ದ ದಾವೆಯಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗೆ ದಂಡ ವಿಧಿಸಲಾಗಿದೆ.

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್:‌ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ

2001 ರಲ್ಲಿ ಡಾಂಗಿ ಬ್ಯಾಂಕ್ ನಿಂದ ಕ್ರೆಡಿಟ್ ಕಾರ್ಡ್ ಪಡೆದಿದ್ದರು. ಸೇವೆಯ ಬಗ್ಗೆ ಅಸಮಾಧಾನವಿದ್ದ ಕಾರಣ ಕಾರ್ಡ್ ರದ್ದು ಮಾಡಿದ್ದರು. ಆದರೂ 2004 ರವರೆಗೂ ಬ್ಯಾಂಕ್ ಸಾಲದ ನೋಟಿಸ್ ಕಳಿಸುತ್ತಲೇ ಇತ್ತು. ನಂತರ ಬ್ಯಾಂಕ್ ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾ(ಸಿಐಬಿಐಎಲ್)ಕ್ಕೆ ಮಾಹಿತಿ ನೀಡಿ ಡಾಂಗಿ ಅವರನ್ನು ಕಟ್ ಬಾಕಿದಾರರು ಎಂದು ಘೋಷಿಸಿತ್ತು. ಇದರಿಂದ ಡಾಂಗಿ ಅವರಿಗೆ ಬೇರೆಡೆ ಸಾಲ ಪಡೆಯಲೂ ಸಮಸ್ಯೆಯಾಗಿತ್ತು.‌

ಡಾಂಗಿ ಅವರು 2014 ರಲ್ಲಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿ 40 ಲಕ್ಷ ರೂ. ಪರಿಹಾರ ಕೋರಿದ್ದರು. ನ್ಯಾಯಾಲಯ ಬ್ಯಾಂಕ್ ಗೆ 50 ಸಾವಿರ ರೂ. ದಂಡ ಹಾಗೂ ದಾವೆಯ ಖರ್ಚು 10 ಸಾವಿರ ಸೇರಿಸಿ 60 ಸಾವಿರ ರೂ.ಗಳನ್ನು ತಿಂಗಳಲ್ಲಿ ಪಾವತಿಸುವಂತೆ ಬ್ಯಾಂಕ್ ಗೆ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...