alex Certify ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್:‌ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್:‌ ಭಾರತೀಯ ಸೇನೆಯಲ್ಲಿದೆ ಉದ್ಯೋಗಾವಕಾಶ

ಭಾರತೀಯ ಸೇನೆ ಜುಲೈ 21ರಿಂದ ಟೆಕ್ನಿಕಲ್​ ಎಂಟ್ರಿ ಸ್ಕೀಮ್​ ಕೋರ್ಸ್​ಗೆ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್​ಸೈಟ್​ joinindianarmy.nic.in ಅರ್ಜಿ ಸಲ್ಲಿಸಬಹುದಾಗಿದೆ. ‌

ಭಾರತೀಯ ಸೇನೆಯ 90 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮಾರ್ಚ್​ 2 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿ ಹೊಂದಿರಬೇಕಾದ ಅರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅರ್ಜಿ ಆಹ್ವಾನ ಆರಂಭ ದಿನಾಂಕ : ಫೆಬ್ರವರಿ 1, 2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನ : ಮಾರ್ಚ್​ 2, 2021.

10 + 2 ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಅಥವಾ ಭೌತಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಗಣಿತದಲ್ಲಿ 70 ಪ್ರತಿಶತ ಅಂಕಗಳನ್ನ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 16 1/2 ವರ್ಷದಿಂದ ಮೇಲ್ಪಟ್ಟು 19 1/2 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಕೋರ್ಸ್​ನಲ್ಲಿ ಭಾಗಿಯಾಗಬಹುದಾಗಿದೆ.

ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲನೇ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎರಡನೇ ಹಂತದ ಪರೀಕ್ಷೆಯನ್ನ ಎದುರಿಸಬಹುದಾಗಿದೆ. ಎಸ್​ಎಸ್​ಬಿ ಸಂದರ್ಶನ ಐದು ದಿನಗಳ ಕಾಲ ನಡೆಯಲಿದೆ.

ಈ ಕೋರ್ಸ್​ ಸಂಬಂಧ ಸಂಪೂರ್ಣ ಮಾಹಿತಿ ಭಾರತೀಯ ಸೇನೆಯ ಅಧಿಕೃತ ವೆಬ್​ಸೈಟ್​ ಖಾತೆಯಲ್ಲಿ ಲಭ್ಯವಿದೆ. ಎಸ್​ಎಸ್​ಬಿ ಸಂದರ್ಶನದ ಬಳಿಕ ವೈದ್ಯಕೀಯ ಪರೀಕ್ಷೆ ಇರಲಿದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ತರಬೇತಿಯಲ್ಲಿ ಭಾಗಿಯಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...