alex Certify ಅಮೆಜಾನ್​ ಇಂಡಿಯಾದಿಂದ ಐಫೋನ್​ ಉತ್ಪನ್ನಗಳ ಮೇಲೆ ಭರ್ಜರಿ ವಿನಾಯಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್​ ಇಂಡಿಯಾದಿಂದ ಐಫೋನ್​ ಉತ್ಪನ್ನಗಳ ಮೇಲೆ ಭರ್ಜರಿ ವಿನಾಯಿತಿ….!

ಅಮೆಜಾನ್​ ಇಂಡಿಯಾ ಭಾರತದಲ್ಲಿ ಆಪಲ್​ ಡೇ ಸೇಲ್​ನ್ನು ಆಯೋಜಿಸಿದೆ. ಫೆಬ್ರವರಿ 11ರಿಂದಲೇ ಆರಂಭವಾಗಿರುವ ಈ ಸೇಲ್​ 17ರವರೆಗೆ ಇರಲಿದೆ. ಈ ಸೇಲ್​ ಪ್ರಯುಕ್ತ ಅಮೆಜಾನ್​ ಐಫೋನ್​​ ಮಾಡೆಲ್​ಗಳ ಮೇಲೆ ಭರ್ಜರಿ ಆಫರ್​ ನೀಡುತ್ತಿದೆ.

ಅಮೆಜಾನ್​ ಉತ್ಪನ್ನಗಳ ಮೇಲೆ ಈಗಾಗಲೇ ನಿಗದಿ ಮಾಡಿರುವ ಆಫರ್​ಗಳನ್ನ ಹೊರತುಪಡಿಸಿ ಹೆಚ್​ಡಿಎಫ್​ಸಿ ಡೆಬಿಟ್​ ಕಾರ್ಡ್​ಗಳನ್ನು ಬಳಕೆ ಮಾಡುವವರಿಗೆ ಹೆಚ್ಚುವರಿ 3000 ರೂಪಾಯಿ ವಿನಾಯಿತಿ ಸಿಗಲಿದೆ. ಹಾಗೂ ಹೆಚ್​ಡಿಎಫ್​ಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದವರಿಗೆ ಹೆಚ್ಚುವರಿ 9 ಸಾವಿರ ರೂಪಾಯಿ ವಿನಾಯಿತಿ ಸಿಗಲಿದೆ. ಇದೂ ಕೂಡ ಕಂಪನಿಯ ವ್ಯಾಲಂಟೈನ್​ ಡೇ ಆಫರ್​ ಆಗಿದ್ದು ಫೆಬ್ರವರಿ 14ರಂದು ಕೊನೆಯಾಗಲಿದೆ.

ಆಪಲ್​ ಡೇ ಸೇಲ್​​ನಲ್ಲಿ ಗ್ರಾಹಕರು ಐಪಾಡ್​ ಮಿನಿಗೆ 6 ಸಾವಿರ ರೂಪಾಯಿ ವಿನಾಯಿತಿ ಸಿಗಲಿದೆ. ಆಪಲ್​ ಏರ್​ಪಾಡ್​ಗಳು 2000 ರೂಪಾಯಿ ವಿನಾಯಿತಿ ಬಳಿಕ 12400 ರೂಪಾಯಿಗೆ ಲಭ್ಯವಿದೆ.

‘ವಿಶ್ವ ರೇಡಿಯೋ ದಿನ’ಕ್ಕೆ ಒಡಿಶಾ ಕಲಾವಿದನಿಂದ ವಿಶೇಷ ಕೊಡುಗೆ..!

ಐಫೋನ್​ 13 ಮಿನಿಗೆ 5410 ರೂಪಾಯಿ ವಿನಾಯಿತಿ ನೀಡಲಾಗಿದ್ದು 64490 ರೂಪಾಯಿಗೆ ಲಭ್ಯವಿದೆ. ಐಫೋನ್​ 11 ಪ್ರೋಗೆ 82900 ರೂಪಾಯಿ, 128 ಜಿಬಿಯ ಐ ಫೋನ್​ 12 ಮೊಬೈಲ್​ 84889 ರೂಪಾಯಿಗೆ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...