alex Certify ಒಂದೇ ದಿನ 4 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟ ಮಾಡಿತ್ತು ಈ ಕಂಪನಿ; ಇಲ್ಲಿದೆ ಇನ್ನಷ್ಟು ಇಂಟ್ರೆಸ್ಟಿಂಗ್‌ ಸಂಗತಿಗಳು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ 4 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟ ಮಾಡಿತ್ತು ಈ ಕಂಪನಿ; ಇಲ್ಲಿದೆ ಇನ್ನಷ್ಟು ಇಂಟ್ರೆಸ್ಟಿಂಗ್‌ ಸಂಗತಿಗಳು…..!

ಸ್ಮಾರ್ಟ್ ಡಿವೈಸ್‌ಗಳಲ್ಲಿ ಆಪಲ್ ಹೆಸರು ಅಗ್ರಸ್ಥಾನದಲ್ಲಿದೆ. ಆಪಲ್ ಕಂಪನಿ ಹೊಸ ಹೊಸ ಡಿವೈಸ್‌ಗಳನ್ನು ಬಿಡುಗಡೆ ಮಾಡಿದಾಗಲೆಲ್ಲ ಅದು ಅತಿ ಹೆಚ್ಚು ಮಾರಾಟವಾಗುತ್ತದೆ. ವಿಶೇಷವೆಂದರೆ ಈ ಕಂಪನಿ ಪ್ರಾರಂಭವಾಗಿದ್ದು 1976ರ ಏಪ್ರಿಲ್ 1ರಂದು. ಕಂಪನಿ ಆರಂಭವಾಗಿ 48 ವರ್ಷಗಳಾಗಿವೆ, ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್ ಮತ್ತು ರೊನಾಲ್ಡ್ ವೇನ್, ಕ್ಯಾಲಿಫೋರ್ನಿಯಾದಲ್ಲಿ Apple Inc. ಅನ್ನು ಸ್ಥಾಪಿಸಿದರು.

ಆರಂಭದಲ್ಲಿ ಆಪಲ್ ಹೆಸರಿಗೆ ಕಂಪ್ಯೂಟರ್ ಎಂಬ ಪದವನ್ನು ಸೇರಿಸಲಾಯಿತು. ಆದರೆ 2007 ರಲ್ಲಿ ಕಂಪ್ಯೂಟರ್ ಎಂಬ ಪದವನ್ನು ಹೆಸರಿನಿಂದ ತೆಗೆದುಹಾಕಲಾಯಿತು, ಸ್ಟೀವ್ ಜಾಬ್ಸ್ ಮಾರುಕಟ್ಟೆಯಲ್ಲಿ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿದರು. 48 ವರ್ಷ ಪೂರೈಸಿರುವ ಆಪಲ್‌ ಕಂಪನಿ ಕುರಿತ ಇಂಟ್ರೆಸ್ಟಿಂಗ್‌ ಸಂಗತಿಗಳನ್ನು ತಿಳಿದುಕೊಳ್ಳೋಣ.

ಒಂದೇ ದಿನದಲ್ಲಿ 4,11,000 ಐಫೋನ್‌ ಮಾರಾಟ

2013 ರಲ್ಲಿ ಆಪಲ್ ಕಂಪನಿ ಒಂದೇ ದಿನದಲ್ಲಿ 4,11,000 ಐಫೋನ್‌ಗಳನ್ನು ಮಾರಾಟ ಮಾಡಿದೆ. ಐಫೋನ್ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ.

ಪ್ರತಿಯೊಂದು ಆಪಲ್ ಜಾಹೀರಾತು ಒಂದೇ ಸಮಯವನ್ನು ತೋರಿಸುತ್ತದೆ. 9:41 ಎಂದು ಬರೆಯಲಾಗಿರುತ್ತದೆ. ಇದು ಸ್ಟೀವ್ ಜಾಬ್ಸ್ 2007ರಲ್ಲಿ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿದ ಸಮಯ. ಬಳಿಕ 2010 ರಲ್ಲಿ ಮೊದಲ ಐಪಾಡ್‌ ಅನ್ನು ಕೂಡ ಅದೇ ಸಮಯದಲ್ಲಿ ಬಿಡುಗಡೆ ಮಾಡಲಾಯಿತು.

Apple ಕೇವಲ iPhone, Mac, Apple Watch ನಂತಹ ತಂತ್ರಜ್ಞಾನ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ ಎಂದುಕೊಳ್ಳಬೇಡಿ. ಈ ಕಂಪನಿಯ ಬಟ್ಟೆಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿವೆ. 1987 ರಲ್ಲಿ ಕಂಪನಿ “The Apple ಕಲೆಕ್ಷನ್” ಎಂಬ ಬಟ್ಟೆ ಶ್ರೇಣಿಯನ್ನು ಪ್ರಾರಂಭಿಸಿತು.

ಕಂಪನಿಗೆ ಆಪಲ್ ಎಂಬ ಹೆಸರು ಬಂದಿದ್ಹೇಗೆ?

ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ “ಆಪಲ್” ಎಂದು ನಾಮಕರಣ ಮಾಡಿದ್ದರು. ವಿಶೇಷವೆಂದರೆ ಸ್ಟೀವ್‌ ಜಾಬ್ಸ್‌ಗೆ ಆಪಲ್‌ ಬಹಳ ಪ್ರಿಯವಾಗಿತ್ತು. “ಆಪಲ್” ಎಂಬ ಹೆಸರು ವಿನೋದವಾಗಿದೆ ಮತ್ತು ರೋಮಾಂಚನಕಾರಿ ಎಂದು ಅವರು ಭಾವಿಸಿದರು. ಅದಕ್ಕಾಗಿಯೇ ಅವರು ಕಂಪನಿಗೆ ಈ ಹೆಸರನ್ನು ನೀಡಿದರು. ಆಪಲ್ ಮತ್ತು ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳೆಂದು ಅನಿಸುತ್ತವೆ. ಆದರೆ ಸ್ಯಾಮ್‌ಸಂಗ್ ಕಂಪನಿ, ಆಪಲ್‌ನ ಐಪ್ಯಾಡ್‌ಗಾಗಿ ರೆಟಿನಾ ಡಿಸ್‌ಪ್ಲೇಗಳನ್ನು ಅಭಿವೃದ್ಧಿಪಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...