alex Certify ‘ಲಾಕ್ ಡೌನ್’ ಮದುವೆಗೂ ಬಂತು ಪ್ಯಾಕೇಜ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲಾಕ್ ಡೌನ್’ ಮದುವೆಗೂ ಬಂತು ಪ್ಯಾಕೇಜ್…!

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆಯಲ್ಲದೇ ಪ್ರಾರ್ಥನಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳನ್ನೂ ನಡೆಸದಂತೆ ನಿಷೇಧ ಹೇರಲಾಗಿದ್ದು, ಮದುವೆ ಸಮಾರಂಭಗಳಿಗೆ ನಿಯಮಾವಳಿಗಳೊಂದಿಗೆ ಅನುಮತಿ ನೀಡಲಾಗಿದೆ.

ಮದುವೆ ಸಮಾರಂಭದಲ್ಲಿ ಕೇವಲ 50 ಮಂದಿ ಮಾತ್ರ ಭಾಗವಹಿಸಬಹುದೆಂಬ ನಿಯಮವಿದ್ದು, ಸಮಾರಂಭದ ವೇಳೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಈಗ ಈ ಲಾಕ್ ಡೌನ್ ಮದುವೆಗೂ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯೊಂದು ಪ್ಯಾಕೇಜ್ ಆಫರ್ ನೀಡಿದೆ.

ಕರಾವಳಿಯ ಇವೆಂಟ್ ಮ್ಯಾನೇಜ್ಮೆಂಟ್ ನೀಡಿರುವ ಈ ಮ್ಯಾರೇಜ್ ಪ್ಯಾಕೇಜ್ ಆಫರ್ ಪ್ರಕಾರ 1,99,999 ರೂಪಾಯಿ ಪಾವತಿಸಿದರೆ 50 ಮಂದಿಗೆ N95 ಮಾಸ್ಕ್ ಜೊತೆಗೆ ವಿವಾಹ ಆಮಂತ್ರಣ ಪತ್ರಿಕೆ, ವಧು – ವರ ಅಲಂಕಾರ, ಮೆಹಂದಿ ಅಲಂಕಾರ, ಫೋಟೋಗ್ರಫಿ, ವಿಡಿಯೋಗ್ರಫಿ, ಸ್ವಾಗತ ದ್ವಾರದ ಹಾಗೂ ಮದುವೆ ಮಂಟಪದ ಅಲಂಕಾರ, 50 ಮಂದಿಗೆ ಸಸ್ಯಹಾರಿ ಊಟ, ಧ್ವನಿವರ್ಧಕ ವ್ಯವಸ್ಥೆ, ಫೋಟೋ ಆಲ್ಬಂ, ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...