alex Certify ಗಮನಿಸಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ – ಶಾಖೆ ಸಮಯ ಬದಲಿಸಿದ SBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ – ಶಾಖೆ ಸಮಯ ಬದಲಿಸಿದ SBI

ಕೊರೊನಾ ವೈರಸ್  ಹಿನ್ನೆಲೆಯಲ್ಲಿ ದೇಶದ ಅನೇಕ ಬ್ಯಾಂಕುಗಳು ತಮ್ಮ ಶಾಖೆಗಳ ಆರಂಭಿಕ ಮತ್ತು ಮುಕ್ತಾಯದ ಸಮಯವನ್ನು ಬದಲಾಯಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರದ ನಿಯಮಗಳನ್ನು ಅನುಸರಿಸಲು ಇದನ್ನು ಮಾಡಲಾಗಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಕೂಡ ಸಮಯಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಶಾಖೆಗೆ ಬರುವ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ಬ್ಯಾಂಕ್ ಶಾಖೆಗೆ ಬರುವ ಬದಲು ಜನರು ಡಿಜಿಟಲ್ ಚಾನೆಲ್‌ಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ. ಎಸ್‌ಬಿಐ ತನ್ನ ಶಾಖೆಗಳನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ಸಮಯಗಳಲ್ಲಿ ತೆರೆಯುತ್ತಿದೆ. ಕೆಲವು ರಾಜ್ಯಗಳ ಬ್ಯಾಂಕ್ ಶಾಖೆ ಬೆಳಿಗ್ಗೆ 7-10 ಗಂಟೆಯವರೆಗೆ ಕೆಲಸ ಮಾಡಲಿದೆ. ಕೆಲ ರಾಜ್ಯಗಳಲ್ಲಿ ಬೆಳಿಗ್ಗೆ 8-11 ಗಂಟೆಯವರೆಗೆ ತೆರೆಯಲಿದೆ. ಕೆಲ ಕಡೆ ಬೆಳಿಗ್ಗೆ 10-2ರವರೆಗೆ ನಡೆಯಲಿದೆ.

ಬ್ಯಾಂಕುಗಳ ಶಾಖೆಯ ಸಮಯದ ಬದಲಾವಣೆಯ ಜೊತೆಗೆ, ಬ್ಯಾಂಕುಗಳು ಡಿಜಿಟಲ್ ಬ್ಯಾಂಕಿಂಗ್ ಬಳಸಲು ಜನರಿಗೆ ಸಲಹೆ ನೀಡ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...