alex Certify ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ

ಕೊರೊನಾ ವೈರಸ್ ಸ್ಥಳೀಯ ಲಸಿಕೆ ಕೊವಾಕ್ಸಿನ್ ಬಗ್ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ನ ಕೊರೊನಾ ಲಸಿಕೆಯ ಮೊದಲ ಹಂತದ ಪರೀಕ್ಷೆ ಬಹುತೇಕ ಯಶಸ್ವಿಯಾಗಿದೆ.

ಕೊವಾಕ್ಸಿನ್ ಪರೀಕ್ಷೆಗೆ 375 ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿದೆ. ದೇಶಾದ್ಯಂತ 12 ಸ್ಥಳಗಳಲ್ಲಿ ಪ್ರಯೋಗಗಳು ನಡೆಯುತ್ತಿವೆ. ಪ್ರತಿ ಸ್ವಯಂಸೇವಕರಿಗೆ ಎರಡು ಡೋಸ್ ಲಸಿಕೆಗಳನ್ನು ನಿಗದಿಪಡಿಸಲಾಗಿದೆ. ಲಸಿಕೆ ಪ್ರಯೋಗಗಳಲ್ಲಿ ಸುರಕ್ಷಿತವಾಗಿದೆ ಎಂಬುದು ಕಂಡುಬಂದಿದೆ.

ಇಲ್ಲಿಯವರೆಗೆ ಯಾವುದೇ ವ್ಯಕ್ತಿಯ ಮೇಲೆ ಯಾವುದೇ ಅಡ್ಡಪರಿಣಾಮವಿಲ್ಲ. ರಕ್ತ ಪರೀಕ್ಷೆ ಇತ್ಯಾದಿಗಳು ಇನ್ನೂ ನಡೆಯುತ್ತಿವೆ. ಮೊದಲ ಹಂತ ಪೂರ್ಣಗೊಳ್ಳಲು ಆಗಸ್ಟ್ ತಿಂಗಳು ಹಿಡಿಯಲಿದೆ.  ಸ್ವಯಂಸೇವಕರಿಗೆ ಈಗ ಮತ್ತೊಂದು ಡೋಸ್ ನೀಡಬೇಕಾಗಿದೆ.12 ಸ್ಥಳಗಳ ಸ್ವಯಂ ಸೇವಕರ ಫಲಿತಾಂಶ ಯಶಸ್ವಿಯಾಗಿ ಬಂದಲ್ಲಿ ಎರಡನೇ ಹಂತದ ಪರೀಕ್ಷೆ ನಡೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...