alex Certify ಇವರೇ ನೋಡಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಬಡಿಸಿದ ಐಸ್ ಕ್ರೀಂ ಕಂಪನಿ ಒಡೆಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರೇ ನೋಡಿ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಬಡಿಸಿದ ಐಸ್ ಕ್ರೀಂ ಕಂಪನಿ ಒಡೆಯ

Scoops of Happiness: This Ice Cream Brand From Ahmedabad Was A Show Stealer  At Ambani Bash

ಈ ವರ್ಷದ ಮಾರ್ಚ್‌ನಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೊತೆಗಿನ ವಿವಾಹ ಪೂರ್ವ ಕಾರ್ಯಕ್ರಮ ಭಾರೀ ಗಮನ ಸೆಳೆದಿತ್ತು. ಗುಜರಾತ್‌ನ ಜಾಮ್‌ನಗರದಲ್ಲಿ 3 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಜನಪ್ರಿಯ ವ್ಯಕ್ತಿಗಳು ಮತ್ತು ಬಾಲಿವುಡ್ ಸೂಪರ್‌ಸ್ಟಾರ್‌ಗಳು ಭಾಗವಹಿಸಿದ್ದರು.

ಈವೆಂಟ್‌ನಲ್ಲಿ ಹಲವಾರು ಭಕ್ಷ್ಯಗಳು ಮತ್ತು ಪಾಕವಿಧಾನಗಳು ಗಮನ ಸೆಳೆದಿದ್ದವು. ಸುಮಾರು 2,500 ಖಾದ್ಯ ಮತ್ತು ಕೆಲವು ಸ್ವದೇಶಿ ಬ್ರಾಂಡ್‌ಗಳನ್ನು ಸಹ ಮೆನುವಿನಲ್ಲಿ ತೋರಿಸಲಾಗಿತ್ತು. ಆದರೆ ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಅಹಮದಾಬಾದ್ ನ ಶಂಕರ್ ಐಸ್ ಕ್ರೀಂ. ಸಮಾರಂಭದಲ್ಲಿ ನೀಡಲು ಇದು ಅತ್ಯುತ್ತಮ ಐಸ್ ಕ್ರೀಂ ಎಂದು ಆಯ್ಕೆ ಮಾಡಿಕೊಳ್ಳಲಾಗಿತ್ತು.

ಶಂಕರ್ ಐಸ್ ಕ್ರೀಂ ಬೆಳೆದುಬಂದ ಹಾದಿ

ಶಂಕರ್ ಐಸ್ ಕ್ರೀಂ ಕಂಪನಿಯು 1960 ರಿಂದ ಅಹಮದಾಬಾದ್‌ನಲ್ಲಿ ಅತ್ಯುತ್ತಮ ಪ್ರೀಮಿಯಂ ಐಸ್‌ಕ್ರೀಮ್‌ಗಳನ್ನು ಪೂರೈಸುತ್ತಿದೆ. ಈ ಸಂಸ್ಥೆಯು ಶಂಕರ್ ಐಸ್‌ಕ್ರೀಮ್‌ನ ನಿರ್ದೇಶಕರಾದ ಭಾಗ್ಯೇಶ್ ಸಾಮ್ನಾನಿ ಅವರ ನೇತೃತ್ವದಲ್ಲಿದೆ. 2013 ರಲ್ಲಿ ತಮ್ಮ ತಂದೆ ಅರುಣ್ಭಾಯ್ ಸಾಮ್ನಾನಿಯವರಿಂದ ಕಂಪನಿಯ ಹೊಣೆಗಾರಿಕೆ ಪಡೆದ ಸಾಮ್ನಾನಿ ಕುಟುಂಬದ ಮೂರನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಆರಂಭದಲ್ಲಿ ಸಂಸ್ಥೆಯನ್ನು ಅಹಮದಾಬಾದ್‌ನ ಲಾ ಗಾರ್ಡನ್‌ನಲ್ಲಿ ಭಾಗ್ಯೇಶ್ ಅವರ ಅಜ್ಜ ಗೋಪಿಲಾಲ್ ಸಾಮ್ನಾನಿ ಸ್ಥಾಪಿಸಿದರು.

ಭಾಗ್ಯೇಶ್‌ಗೆ ವ್ಯಾಪಾರದ ಬಗ್ಗೆ ಉತ್ಸಾಹವಿದ್ದು 2017 ರಲ್ಲಿ ಅಹಮದಾಬಾದ್‌ನಲ್ಲಿ ಶಂಕರ್ಸ್ ಐಸ್ ಕ್ರೀಮ್ ಲೈಬ್ರರಿ ಎಂಬ ಹೆಸರಿನೊಂದಿಗೆ ಐಸ್ ಕ್ರೀಮ್ ಪಾರ್ಲರ್ ಅನ್ನು ತೆರೆದರು. ಅವರ ಶಂಕರ್ ಐಸ್ ಕ್ರೀಮ್ ಮೆನುವಿನಲ್ಲಿ ಬ್ಲಾಕ್ ಜಾಮೂನ್, ಜಾಮೂನ್- ಮ್ಯಾಂಗೋ ಮಿಶ್ರಣ, ಕಲ್ಲಂಗಡಿ, ಮಿಶ್ರ ಬೆರ್ರಿ ಸೇರಿದಂತೆ ದೊಡ್ಡ ಪಟ್ಟಿಯಿದೆ.

ಶಂಕರ್ ಐಸ್ ಕ್ರೀಮ್ ಪಾರ್ಲರ್ ಅಗಾಧವಾದ ಹೂವುಗಳು, ಬೀಜಗಳು, ಚಾಕೊಲೇಟ್ಗಳು ಮತ್ತು ಹಣ್ಣುಗಳನ್ನು ಬಳಸಿಕೊಂಡು 1300 ಕ್ಕೂ ಬೆಚ್ಚು ಬಗೆಯ ರುಚಿಕರ ಐಸ್ ಕ್ರೀಂ ತಯಾರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...