alex Certify ಕೊರೊನಾ ಸಂಕಟದ ಮಧ್ಯೆ ಹೆಚ್ಚಾಗಲಿದೆ ನಿಮ್ಮ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಟದ ಮಧ್ಯೆ ಹೆಚ್ಚಾಗಲಿದೆ ನಿಮ್ಮ ಸಂಬಳ

ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿ ನಿಯಮಗಳನ್ನು ಮೂರು ತಿಂಗಳವರೆಗೆ ಬದಲಾಯಿಸಿದೆ. ಈ ಹೊಸ ನಿಯಮದ ಪ್ರಕಾರ, ಮೇ ಮತ್ತು ಜುಲೈ ನಡುವೆ ನೌಕರರು ಮತ್ತು ಉದ್ಯೋಗದಾತರ ಇಪಿಎಫ್ ಕೊಡುಗೆ 12 ಪ್ರತಿಶತದ ಬದಲು ಶೇಕಡಾ 10ರಷ್ಟಿರಲಿದೆ. ಸರ್ಕಾರದ ಈ ನಿರ್ಧಾರದ ನಂತರ  ನೌಕರರ ಟೇಕ್ ಹೋಂ ಸಂಬಳ ಹೆಚ್ಚಾಗಲಿದೆ. ಇದು ಉದ್ಯೋಗದಾತರ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ.

ಇದು ಮೇ, ಜೂನ್ ಮತ್ತು ಜುಲೈ ತಿಂಗಳುಗಳಿಗೆ ಮಾತ್ರ ಅನ್ವಯಿಸುತ್ತದೆ. ಸರ್ಕಾರದ ಈ ಹಂತವು ನೌಕರರ ಟೇಕ್ ಹೋಮ್ ವೇತನವನ್ನು ಹೆಚ್ಚಿಸುತ್ತದೆ. ಈ ಮೊದಲು ಉದ್ಯೋಗಿ ಮತ್ತು ಉದ್ಯೋಗದಾತರ ಒಟ್ಟು ಇಪಿಎಫ್ ಕೊಡುಗೆ 2,400 ರೂಪಾಯಿಯಾಗಿದ್ದರೆ  ಈಗ ಅದನ್ನು ಕೇವಲ 2,000 ರೂಪಾಯಿಗೆ ಇಳಿಸಲಾಗುವುದು. ಉಳಿದ 400 ರೂಪಾಯಿಗಳನ್ನು ನೌಕರರ ಟೇಕ್ ಹೋಮ್ ವೇತನದಲ್ಲಿ ನೀಡಲಾಗುವುದು.

ಇಪಿಎಫ್ ಕಡಿತದ ನಿಯಮ  ಕೇಂದ್ರ ನೌಕರರಿಗೆ ಅನ್ವಯಿಸುವುದಿಲ್ಲ. ಅವರು ಮೊದಲಿನಂತೆ ಉದ್ಯೋಗದಾತ ಮತ್ತು ಉದ್ಯೋಗಿಯಿಂದ ಶೇಕಡಾ 12 ರಷ್ಟು  ಕೊಡುಗೆ ಪಡೆಯಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...