alex Certify ಶಾಸಕ ಭೀಮಣ್ಣ ನಾಯಕ ಮೇಲೆ ಜೇನು ದಾಳಿ: ಆಸ್ಪತ್ರೆಗೆ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಸಕ ಭೀಮಣ್ಣ ನಾಯಕ ಮೇಲೆ ಜೇನು ದಾಳಿ: ಆಸ್ಪತ್ರೆಗೆ ದಾಖಲು

ಕಾರವಾರ: ಶಾಸಕ ಭೀಮಣ್ಣ ನಾಯಕ ಅವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಶಿರಸಿ ನಗರಕ್ಕೆ ನೀರಿನ ಲಭ್ಯತೆ ಪರಿಶೀಲಿಸಲು ಅಧಿಕಾರಿಗಳೊಂದಿಗೆ ಕೆಂಗ್ರೆ ಹೊಳೆಗೆ ತೆರಳಿದ್ದ ಸಂದರ್ಭದಲ್ಲಿ ಜೇನುನೊಣಗಳು ದಾಳಿ ಮಾಡಿವೆ.

7 ಜೇನುನೊಣಗಳು ಕಡಿದು ಮುಖದ ಮೇಲೆ ಗಾಯ ಉಂಟಾಗಿದ್ದರಿಂದ ಭೀಮಣ್ಣ ನಾಯಕ ಅವರನ್ನು ಶಿರಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಶಾಸಕರೊಂದಿಗೆ ಇದ್ದ ಪೌರಾಯುಕ್ತ ಕಾಂತರಾಜ್ ಮತ್ತು ನಗರಸಭೆ ಸದಸ್ಯರಾದ ಅಬ್ದುಲ್ ಖಾದರ್ ಆನವಟ್ಟಿ, ಪ್ರದೀಪ ಶೆಟ್ಟಿ ಅವರಿಗೂ ಜೇನು ಹುಳಗಳು ಕಡಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...