alex Certify ಬಿಗ್ ನ್ಯೂಸ್: NGO ಗೆ ಸಂಬಂಧಿಸಿದಂತೆ ಹೊಸ ನಿಯಮ ಹೊರಡಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: NGO ಗೆ ಸಂಬಂಧಿಸಿದಂತೆ ಹೊಸ ನಿಯಮ ಹೊರಡಿಸಿದ ಸರ್ಕಾರ

ವಿದೇಶದಿಂದ ಧನ ಸಹಾಯ ಪಡೆಯುವ ಉದ್ದೇಶ ಹೊಂದಿರುವ ಎನ್ ಜಿ ಒಗಳು ಕೇಂದ್ರ ಗೃಹ ಸಚಿವಾಲಯದ ಕಠಿಣ ನಿಯಮಗಳನ್ನು ಪಾಲಿಸಬೇಕಾಗಿದೆ. ಕನಿಷ್ಠ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಒಗಳು ಮಾತ್ರ ವಿದೇಶದಿಂದ ಧನ ಸಹಾಯ ಪಡೆಯಬಹುದಾಗಿದೆ. ಇಷ್ಟೇ ಅಲ್ಲ ಎನ್ ಜಿ ಒಗಳು 15 ಲಕ್ಷ ರೂಪಾಯಿಗಳನ್ನು ಸಾಮಾಜಿಕ ಚಟುವಟಿಕೆಗೆ ಖರ್ಚು ಮಾಡ್ತಿರುವ ಎನ್ ಜಿ ಒಗಳು ಮಾತ್ರ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ದಾನಿಗಳಿಂದ ಪಡೆದ ಪ್ರಮಾಣ ಪತ್ರವನ್ನು ವಿದೇಶಿ ನಿಯಂತ್ರಣ ಕಾಯ್ದೆಯಡಿ ನೋಂದಣಿ ಮಾಡುವುದು ಅನಿವಾರ್ಯವಾಗಿದೆ. 2016-17 ಮತ್ತು 2018-19ರ ನಡುವೆ, ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲಾದ ಸರ್ಕಾರೇತರ ಸಂಸ್ಥೆಗಳು 58,000 ಕೋಟಿಗೂ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸಿವೆ. ದೇಶದಲ್ಲಿ ಪ್ರಸ್ತುತ ಸುಮಾರು 22,400 ಎನ್‌ಜಿಒಗಳಿವೆ.

ಕಾನೂನಿನ ತಿದ್ದುಪಡಿಯ ನಂತರ ಕೇಂದ್ರ ಸರ್ಕಾರ ಸುಮಾರು ಎರಡು ತಿಂಗಳ ಹಿಂದೆ ಎಫ್‌ಸಿಆರ್‌ಎ ನಿಯಮಗಳನ್ನು ಹೊರಡಿಸಿತು. ಇದರ ಅಡಿಯಲ್ಲಿ ಎನ್ಜಿಒ ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ನೀಡುವುದು ಅನಿವಾರ್ಯವಾಗಿದೆ. ನಿಧಿಯಲ್ಲಿ ಶೇಕಡಾ 20 ರಷ್ಟನ್ನು ಕಚೇರಿ ಖರ್ಚಿಗೆ ಸೀಮಿತಗೊಳಿಸಲಾಗಿದೆ. ಸರ್ಕಾರಿ ನೌಕರರು, ಶಾಸಕಾಂಗದ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ವಿದೇಶಿ ನಿಧಿಯನ್ನು ಪಡೆಯುವಂತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...