HomeEntertainmentಮುಂಬೈ ನಿವಾಸವನ್ನು ಮಾರಾಟಕ್ಕಿಟ್ಟ ಕಂಗನಾ ? ಕುತೂಹಲಕ್ಕೆ ಕಾರಣವಾಯ್ತು ನಟಿ ನಡೆ....!

ಮುಂಬೈ ನಿವಾಸವನ್ನು ಮಾರಾಟಕ್ಕಿಟ್ಟ ಕಂಗನಾ ? ಕುತೂಹಲಕ್ಕೆ ಕಾರಣವಾಯ್ತು ನಟಿ ನಡೆ….!

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸದಸ್ಯೆಯಾಗಿ ಆಯ್ಕೆಯಾಗಿರುವ ನಟಿ ಕಂಗನಾ ರಣಾವತ್, ಮುಂಬೈನ ಪ್ರತಿಷ್ಠಿತ ಬಡಾವಣೆ ಪಾಲಿ ಹಿಲ್ ನಲ್ಲಿರುವ ತಮ್ಮ ನಿವಾಸವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭೆಗೆ ಆಯ್ಕೆಯಾದ ಬಳಿಕ ನಟಿ ಕಂಗನಾ ತೆಗೆದುಕೊಂಡಿರುವ ಈ ತೀರ್ಮಾನ ಅಚ್ಚರಿಗೆ ಕಾರಣವಾಗಿದೆ.

ಕಂಗನಾ ಅವರಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ ಮುಂಬೈನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಿರ್ವಹಿಸುವ ಯೂಟ್ಯೂಬ್ ಪೇಜ್ ‘ಕೋಡ್ ಎಸ್ಟೇಟ್’ ನಲ್ಲಿ ನಟಿಯ ನಿವಾಸ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಕಚೇರಿಯ ವಿಡಿಯೋವನ್ನು ಹಾಕಲಾಗಿದೆ. ಕಂಗನಾ ಅವರ ಈ ಪ್ರಾಪರ್ಟಿಗೆ 40 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಬಳಿಕ ಕಂಗನಾ ರಣಾವತ್ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಮಾಚಲ ಪ್ರದೇಶದ ತಮ್ಮ ಸ್ವಕ್ಷೇತ್ರ ಹಾಗೂ ನವದೆಹಲಿಯಲ್ಲಿ ಹೆಚ್ಚಿನ ಸಮಯ ಕಳೆಯಲು ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಮುಂಬೈ ನಿವಾಸವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಟರೆಸ್ಟಿಂಗ್ ಸಂಗತಿ ಎಂದರೆ ಕಂಗನಾ ರಣಾವತ್ ಅವರ ಈ ನಿವಾಸದ ಒಂದು ಭಾಗವನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಮುಂಬೈ ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಲು ಮುಂದಾಗಿತ್ತು. ಕಾರ್ಯಾಚರಣೆ ನಡೆದಿರುವಾಗಲೇ ಕಂಗನಾ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆ ಬಳಿಕ ತಮಗೆ ಎರಡು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮುಂಬೈ ಮಹಾನಗರ ಪಾಲಿಕೆ ವಿರುದ್ಧ ಕಂಗನಾ ಮೊಕದ್ದಮೆ ಹೂಡಿದ್ದರು ಸಹ ಬಳಿಕ ಹಿಂಪಡೆದಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular