HomeKarnatakaBREAKING : ರಾಯಚೂರಿನಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದ ‘ಗುರೂಜಿ’ ಅರೆಸ್ಟ್..!

BREAKING : ರಾಯಚೂರಿನಲ್ಲಿ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದ ‘ಗುರೂಜಿ’ ಅರೆಸ್ಟ್..!

ರಾಯಚೂರು : ಪೆನ್ನು ಕದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರಿನ ರಾಮಕೃಷ್ಣ ಆಶ್ರಮದ ಗುರೂಜಿ ಇಂತಹ ಕೃತ್ಯ ಎಸಗಿದ್ದು,ವಿದ್ಯಾರ್ಥಿಯನ್ನು ಥಳಿಸಿ, ಕೂಡಿಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದರು. ಈ ಹಿನ್ನೆಲೆ ವಿಕೃತ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರವಣ ಕುಮಾರ್ ಎಂಬ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು, ಗುರೂಜಿ ಹೊಡೆದ ಏಟಿಗೆ ಬಾಲಕನ ಕಣ್ಣುಗಳು, ಮುಖ ಊದಿಕೊಂಡಿವೆ. ಆಶ್ರಮದಲ್ಲಿ ತಂಗಿದ್ದ ಶ್ರವಣ ಕುಮಾರ್ ಸಹಪಾಠಿಗಳ ಜೊತೆ ಆಟವಾಡುತ್ತ ಪೆನ್ನು ಕದ್ದಿದ್ದನಂತೆ. ಈ ವಿಚಾರವನ್ನು ಸಹಪಾಠಿಗಳು ಆಶ್ರಮದ ಗುರೂಜಿಗೆ ತಿಳಿಸಿದ್ದಾರೆ. ಆಶ್ರಮದ ಗುರೂಜಿ ವೇಣುಗೋಪಾಲ ಎಂಬುವವರು ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಕರೆದು ವಿಚಾರಿಸಿ ಥಳಿಸಿದ್ದಾರೆ. 3-4 ದಿನ ಕತ್ತಲೆ ಕೋಣೆಯಲ್ಲಿ ಕೂಡಿ ಕಣ್ಣುಗುಡ್ಡೆಗಳಿಗೆ ಏಟು ಕೊಟ್ಟು ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.ಪಶ್ಚಿಮ ಠಾಣೆ ಪೊಲೀಸರು ಆರೋಪಿ ಗುರೂಜಿ ವೇಣುಗೋಪಾಲನನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular