HomeEntertainmentಮಾತೃಭೂಮಿ ಸಿನಿಮಾದಲ್ಲಿ ಗ್ಲಾಮರಸ್ ಹಾಡು: ಸಲ್ಲೂ ಭಾಯ್ ನಡೆಗೆ ಅಭಿಮಾನಿಗಳು ಶಾಕ್!

ಮಾತೃಭೂಮಿ ಸಿನಿಮಾದಲ್ಲಿ ಗ್ಲಾಮರಸ್ ಹಾಡು: ಸಲ್ಲೂ ಭಾಯ್ ನಡೆಗೆ ಅಭಿಮಾನಿಗಳು ಶಾಕ್!

ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ‘ಮಾತೃಭೂಮಿ’ ಸಿನಿಮಾದ ‘ತೇರಿ ಸೆಕ್ಸಿ ಬ್ಯೂಟಿ’ ಎಂಬ ನೂತನ ಹಾಡನ್ನು ಬುಧವಾರ ಬೆಳಗಿನ ಜಾವ 5 ಗಂಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದ್ದಾರೆ.

ಸಲ್ಮಾನ್ ಖಾನ್ ಮತ್ತು ಮುಸ್ಕಾನ್ ಗಾಯನದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾಜಿದ್ ಖಾನ್ ಸಂಗೀತ ಸಂಯೋಜಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಡನ್ನು ಹಂಚಿಕೊಂಡ ಸಲ್ಮಾನ್, ಎರಡು ಪೆಗ್ ಹಾಕಿಕೊಂಡು ತೇಲುತ್ತಿದ್ದೇನೆ ಎಂಬರ್ಥದಲ್ಲಿ ಬರೆದುಕೊಂಡಿರುವ ಶೀರ್ಷಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ದೇಶಭಕ್ತಿಯ ಹಿನ್ನೆಲೆಯುಳ್ಳ ಸಿನಿಮಾದಲ್ಲಿ ಇಂತಹ ಗ್ಲಾಮರಸ್ ಹಾಗೂ ಪಾರ್ಟಿ ಶೈಲಿಯ ಹಾಡು ಸೇರಿಸಿರುವುದಕ್ಕೆ ನೆಟ್ಟಿಗರು ಹಾಗೂ ಸಲ್ಮಾನ್ ಖಾನ್ ಅಭಿಮಾನಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನೈಜ ಘಟನೆಯನ್ನು ಆಧರಿಸಿದ ದೇಶಭಕ್ತಿ ಸಿನಿಮಾದಲ್ಲಿ ಇಂತಹ ಸಾಲುಗಳು ಏತಕ್ಕೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಹೆಸರಿಡಲಾಗಿದ್ದ ಈ ಚಿತ್ರದ ಶೀರ್ಷಿಕೆಯನ್ನು ನಂತರ ‘ಮಾತೃಭೂಮಿ’ ಎಂದು ಬದಲಾಯಿಸಲಾಗಿತ್ತು. ರಕ್ಷಣಾ ಸಚಿವಾಲಯದ ಕೆಲ ಸಲಹೆಗಳು ಹಾಗೂ ಚಿತ್ರಕಥೆಯ ಮರು-ಪರಿಶೀಲನೆಯ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿತ್ತು. ಪ್ರಸ್ತುತ ಸರ್ಕಾರದಿಂದ ಅನುಮತಿ ದೊರೆತಿದ್ದರೂ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular