alex Certify ಸ್ಟ್ಯಾಂಡಪ್​ ಕಾಮಿಡಿಯನ್​​ ಫಾರೂಕಿ ಪರ ನಿಂತ ಸ್ಟಾರ್​ ಸೆಲೆಬ್ರಿಟಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟ್ಯಾಂಡಪ್​ ಕಾಮಿಡಿಯನ್​​ ಫಾರೂಕಿ ಪರ ನಿಂತ ಸ್ಟಾರ್​ ಸೆಲೆಬ್ರಿಟಿಗಳು…!

ಹಿಂದೂ ದೇವತೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಶನಿವಾರ ಸ್ಟ್ಯಾಂಡ್​ ಅಪ್​ ಕಾಮಿಡಿಯನ್​ ಮುನಾವಾರ್​ ಫಾರೂಕಿಯನ್ನು ಮಧ್ಯಪ್ರದೇಶದ ಇಂದೋರ್​ನಲ್ಲಿ ಬಂಧಿಸಲಾಗಿದೆ.

ಇಂದೋರ್​​ನ ಕೆಫೆಯೊಂದರಲ್ಲಿ ಹಿಂದ್​ ರಕ್ಷಕ್​ ಸಂಘಟನೆ ಹಾಗೂ ಹಾಸ್ಯ ಕಾರ್ಯಕ್ರಮದ ಸಂಘಟಕರ ನಡುವೆ ಜಗಳವಾಗಿದೆ ಎಂದು ವರದಿಯಾಗಿದೆ. ಹಿಂದೂ ದೇವತೆಗಳ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ರಕ್ಷಕ್​ ಸಂಘಟನೆ ಮುಖ್ಯಸ್ಥೆ ಹಾಗೂ ಬಿಜೆಪಿ ಶಾಸಕಿ ಮಾಲಿನಿ ಗೌರ್​​ ಪುತ್ರ ಏಕಲವ್ಯ ಸಿಂಗ್​ ಗೌರ್​​ ದೂರು ಸಲ್ಲಿಸಿದ್ದರು.

ಗೌರ್​ ಪ್ರಕಾರ, ಗೌರ್​ ಹಾಗೂ ಸಹಚರರು ಈ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದರು ಹಾಗೂ ಕಾರ್ಯಕ್ರಮದಲ್ಲಿ ಅಸಭ್ಯ ಕಮೆಂಟ್​ಗಳನ್ನ ಕೇಳಿದ ಬಳಿಕ ಕಾರ್ಯಕ್ರಮವನ್ನ ನಿಲ್ಲಿಸುವಂತೆ ಸಂಘಟಕರಿಗೆ ಒತ್ತಾಯಿಸಿದ್ದರು. ಈ ಘಟನೆ ಸಂಬಂಧ ಫಾರುಕಿ ಸಮೇತ ನಾಲ್ವರನ್ನ ಬಂಧಿಸಲಾಗಿದೆ. ಸ್ಥಳೀಯ ಕೋರ್ಟ್​ ಫಾರೂಕಿ ಜಾಮೀನು ಅರ್ಜಿ ತಿರಸ್ಕರಿಸಿ ನ್ಯಾಯಾಂಗ ಬಂಧನದಲ್ಲಿರಿಸಿದೆ.

ಈ ನಡುವೆ ಅನೇಕ ಸೆಲೆಬ್ರಿಟಿಗಳು ಸ್ಟಾಂಡ್​ ಅಪ್​ ಹಾಸ್ಯನಟ ಮುನಾವರ್​ ಫಾರೂಕಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸೆಕ್ರೆಡ್​​ ಗೇಮ್ಸ್ ನಟಿ ಕುಬ್ರಾ ಸೈಟ್​, ಹಾಸ್ಯ ನಟ ವೀರ್​ ದಾಸ್​, ಬರಹಗಾರ ಹಾಗೂ ಕವಿ ವರುಣ್​ ಗ್ರೋವರ್​ ಹಾಗೂ ಹಾಸ್ಯನಟ ರೋಹನ್​ ಜೋಶಿ ಫಾರೂಕಿ ಅವರನ್ನ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ಗಳನ್ನ ಶೇರ್​ ಮಾಡಿದ್ದಾರೆ.

ತಮಾಷೆಯಲ್ಲೂ ತಪ್ಪನ್ನ ಹುಡುಕುತ್ತಾರೆ ಎಂದರೆ ನಮ್ಮ ನಾಯಕರು ಎಷ್ಟು ಸೂಕ್ಷ್ಮವಲ್ಲದ ವ್ಯಕ್ತಿತ್ವ ಹೊಂದಿದ್ದಾರೆ ಅನ್ನೋದು ಇದರಲ್ಲೇ ತಿಳಿಯುತ್ತೆ ಅಂತಾ ಕುಬ್ರಾ ಟ್ವೀಟಾಯಿಸಿದ್ದಾರೆ.

ನೀವು ನಗು ಹಾಗೂ ತಮಾಷೆಯನ್ನ ತಡೆಹಿಡಿಯೋಕೆ ಸಾಧ್ಯವಿಲ್ಲ. ಕಾಮಿಡಿಯನ್​ ಪ್ರದರ್ಶನ ಮಾಡೋದು ಜನರನ್ನ ನಗಿಸೋಕೆ ಎಂದು ವೀರ್​ ದಾಸ್​ ಬರೆದಿದ್ದಾರೆ. ಮಾತ್ರವಲ್ಲದೇ ಪ್ರಧಾನಿ ಮೋದಿ ಟ್ವೀಟ್​ ಒಂದನ್ನ ಶೇರ್ ಮಾಡಿ ಹಾಸ್ಯ ನಮ್ಮ ಜೀವನದಲ್ಲಿ ಸಂತೋಷ ತರುತ್ತದೆ ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...