alex Certify ದೀಪಿಕಾ – ರಣಬೀರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಿಕಾ – ರಣಬೀರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ…!

ಒಂದು ಕಡೆ ಸುಶಾಂತ್ ಸಿಂಗ್ ಅಸಹಜ ಸಾವು ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕುತ್ತಿವೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ಸುಶಾಂತ್ ಸಾವಿನ ಬೆನ್ನಲ್ಲೇ ಕಂಗನಾ ಹಲವಾರು ಮಂದಿಯ ವಿರುದ್ಧ ಸಿಡಿದೆದ್ದಿದ್ದಾರೆ. ಇದೀಗ ಪರೋಕ್ಷವಾಗಿ ಸ್ಟಾರ್ ನಟ-ನಟಿಯ ವಿರುದ್ಧ ಹೇಳಿಕೆ ನೀಡಿದ್ದಾರೆ.

ಹೌದು, ರಣಬೀರ್ ಕಪೂರ್ ಹಾಗೂ ದೀಪಿಕಾ ವಿರುದ್ಧ ಟ್ವಿಟ್ಟರ್ ನಲ್ಲಿ ಖಾರವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಕಂಗನಾ ಸುದ್ದಿಯಾಗಿದ್ದಾರೆ. ರಣಬೀರ್ ಬಗ್ಗೆ ಮಾತನಾಡಿರುವ ಕಂಗನಾ, ರಣಬೀರ್‌ಗೆ ಹುಡುಗಿಯರ ಹುಚ್ಚು ಇದೆ. ಆತ ಪದೇ ಪದೇ ಹುಡುಗಿಯರನ್ನು ತನ್ನತ್ತ ಸೆಳೆಯುತ್ತಾನೆ. ಹಾಗಂತ ಆತನನ್ನು ಯಾರೂ ಕೂಡ ರೇಪಿಸ್ಟ್ ಎಂದು ಕರೆಯುವುದಿಲ್ಲ. ಆ ಧೈರ್ಯ ಕೂಡ ಯಾರಿಗೂ ಇಲ್ಲ ಎಂದು ಟ್ವಿಟ್ ಮಾಡಿದ್ದಾರೆ.

ಇನ್ನು ದೀಪಿಕಾ ವಿಚಾರವಾಗಿಯೂ ಟ್ವಿಟ್ ಮಾಡಿರುವ ಅವರು, ದೀಪಿಕಾ ಒಬ್ಬ ಮಾನಸಿಕ ರೋಗಿ. ಹಾಗಂತ ಅವರನ್ನು ಮಾನಸಿಕ ರೋಗಿ ಅಥವಾ ಸೈಕೋ ಎಂದು ಯಾರು ಕರೆಯುವುದಿಲ್ಲ ಎಂದಿದ್ದಾರೆ. ಈ ಹಿಂದೆ ಕೂಡ ಸ್ವರಾ ಭಾಸ್ಕರ್, ತಾಪ್ಸೀ, ಆಯುಷ್ಮಾನ್ ಖುರಾನಾ ಮುಂತಾದವರ ವಿರುದ್ಧವೂ ಹೇಳಿಕೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...