alex Certify ಇವರೇ ನೋಡಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ನಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರೇ ನೋಡಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ನಟಿ..!

ಫಿಫಾ ವಿಶ್ವಕಪ್ ಫೀವರ್ ಈಗಾಗಲೇ ಆರಂಭ ಆಗಿದೆ. 32 ತಂಡಗಳು ಸುಮಾರು 64 ಪಂದ್ಯಗಳನ್ನು ಆಡಲಿದ್ದಾರೆ. ಡಿಸೆಂಬರ್ 18ಕ್ಕೆ ಫಿಫಾ ಫೈನಲ್ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ಫೈನಲ್ ಗೂ ಮೊದಲು ಟ್ರೋಫಿ ಅನಾವರಣ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಮೊದಲೇ ಟ್ರೋಫಿ ಅನಾವರಣ ಮಾಡಲಾಗುತ್ತಿದೆ. ಈ ಬಾರಿ ಈ ಟ್ರೋಫಿ ಅನಾವರಣ ಮಾಡ್ತಾ ಇರೋದು ನಟಿ ದೀಪಿಕಾ ಪಡುಕೋಣೆ.

ಹೌದು, ಲೂಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳ್ಳಲಿದೆ. ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಕೊಡುಗೆ ಅಪಾರ, ಜಾಗತಿಕ ಮಟ್ಟದಲ್ಲಿ ದೇಶವನ್ನು ಹಲವು ಬಾರಿ ಪ್ರತಿನಿಧಿಸಿರುವ ಈ ನಟಿ ಇದೀಗ ಮತ್ತೊಮ್ಮೆ ಭಾರತದ ಕೀರ್ತಿ ಹೆಚ್ಚಿಸಲು ಹೊರಟಿದ್ದಾರೆ. ಕನ್ನಡ ಮೂಲದ ಈ ನಟಿ ಮತ್ತಷ್ಟು ಕೀರ್ತಿ ತಂದುಕೊಡಲು ಮುಂದಾಗಿದ್ದಾರೆ.

ಕತಾರ್ ನ ಲೂಸೈಲ್ ನಲ್ಲಿ ಇರುವ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇನ್ನು 80 ಸಾವಿರ ಆಸನಗಳು ಇಲ್ಲಿ ಇವೆ. ಸದ್ಯ ದೀಪಿಕಾ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಮ್ ಅವರೊಂದಿಗೆ ಪಠಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಜನವರಿ 25 ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...