alex Certify ಸಂಜಯ್ ದತ್ ಆರೋಗ್ಯದ ಬಗ್ಗೆ ಪತ್ನಿ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಜಯ್ ದತ್ ಆರೋಗ್ಯದ ಬಗ್ಗೆ ಪತ್ನಿ ಹೇಳಿದ್ದೇನು…?

ಬಾಲಿವುಡ್ ನಟ ಸಂಜಯ್ ದತ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯದ ಕಾರಣ ಚಿತ್ರಗಳ ಶೂಟಿಂಗ್ ನಿಂದ ದೂರವಿರುವುದಾಗಿ ದತ್ ತಿಳಿಸಿದ್ದಾರೆ. ದತ್ ಈ ಹೇಳಿಕೆ ನಂತ್ರ ಅವ್ರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹರಿದಾಡ್ತಿದೆ. ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ 4ನೇ ಹಂತದಲ್ಲಿದೆ ಎನ್ನಲಾಗ್ತಿದೆ. ಆದ್ರೀಗ ಈ ಬಗ್ಗೆ ಪತ್ನಿ ಮಾನ್ಯತಾ ದತ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾನ್ಯತಾ ದತ್ ಸ್ವಲ್ಪ ಸಮಯದ ಹಿಂದೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಊಹಾಪೋಹಗಳು, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮಾನ್ಯತಾ ಹೇಳಿದ್ದಾರೆ. ಸಂಜು ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ಈ ಸಮಯದಲ್ಲಿ ನಮಗೆ ಶಕ್ತಿ, ಪ್ರಾರ್ಥನೆ ಬೇಕು. ಒಂದು ವರ್ಷಗಳಿಂದ ನಮ್ಮ ಕುಟುಂಬ ಸಾಕಷ್ಟು ಕಷ್ಟ ಅನುಭವಿಸುತ್ತಿದೆ. ಆದ್ರೆ ಈ ಸಮಯ ಶೀಘ್ರದಲ್ಲೇ ಮುಗಿಯಲಿದೆ ಎಂದು ನಾನು ನಂಬಿದ್ದೇನೆಂದು ಮಾನ್ಯತಾ ಹೇಳಿದ್ದಾರೆ.

ಸಂಜಯ್ ದತ್ ಉಸಿರಾಟದ ತೊಂದರೆಯಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅವ್ರಿಗೆ ಕೊರೊನಾ ಎಂದು ಶಂಕಿಸಲಾಗಿತ್ತು. ಆದ್ರೆ ಪರೀಕ್ಷೆ ವೇಳೆ ನೆಗೆಟಿವ್ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...