alex Certify ಈಗ ಹೇಗಿದ್ದಾರೆ ಗೊತ್ತಾ ಹೆಸರಾಂತ ನಟಿ ರಂಭಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗ ಹೇಗಿದ್ದಾರೆ ಗೊತ್ತಾ ಹೆಸರಾಂತ ನಟಿ ರಂಭಾ….?

ಬಹುಭಾಷಾ ನಟಿ, ಹೆಸರಿಗೆ ತಕ್ಕಂತೆ ರಂಭೆಯಂತೆ ಇರುವ ನಟಿ ರಂಭಾ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ವರ್ಷಗಳೇ ಸರಿದಿವೆ. ತಮಿಳು, ತೆಲುಗು, ಕನ್ನಡ, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿ ಲೋಕದಲ್ಲಿ ರಂಭಾ ನಟಿಸಿ ತಮ್ಮ ಛಾಪನ್ನ ಮೂಡಿಸಿದ್ದಾರೆ.

ಉದ್ಯಮಿ ಇಂದ್ರಕುಮಾರ್​​ ಎಂಬವರ ಜೊತೆ 2010ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಇತ್ತೀಚೆಗಷ್ಟೇ 11 ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಸಂಭ್ರಮಿಸಿದ್ದರು. ಸದ್ಯ ಸಂಸಾರ ಸಮೇತ ಕೆನಡಾದಲ್ಲಿ ವಾಸಿಸುತ್ತಿರುವ ನಟಿ ರಂಭಾ ಮೂವರು ಮಕ್ಕಳ ಪ್ರೀತಿಯ ತಾಯಿ ಕೂಡ ಹೌದು. ಲಾನ್ಯ, ಸಾಶಾ ಹಾಗೂ ಶಿವಿನ್​​ ರಂಭಾರ ಮುದ್ದಿನ ಮಕ್ಕಳ ಹೆಸರಾಗಿದೆ.

ನಟಿ ರಂಭಾ ಸಿನಿ ರಂಗದಿಂದ ದೂರ ಸರಿದಿದ್ದರೂ ಸಹ ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳನ್ನ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪೋಸ್ಟ್​ಗಳ ಮೂಲಕ ಅಭಿಮಾನಿಗಳ ಜೊತೆ ರಂಭಾ ಕನೆಕ್ಟ್ ಆಗಿದ್ದಾರೆ.

ದರ್ಶನ್ – ಪ್ರೇಮ್‌ ಕಾಂಬಿನೇಷನ್ ನಲ್ಲಿ ಮೂಡಿಬರಲಿದೆಯಾ ಸಿನಿಮಾ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಏಪ್ರಿಲ್​ ತಿಂಗಳಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ನಟಿ ರಂಭಾ ಮನೆಯಲ್ಲೇ ಪತಿ ಹಾಗೂ ಮಕ್ಕಳ ಜೊತೆ ವೆಡ್ಡಿಂಗ್​ ಆನಿವರ್ಸರಿಯನ್ನ ಸಂಭ್ರಮಿಸಿದ್ದರು. ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಅವರ ಮಗಳು ಮಾಡಿದ ಗ್ರೀಟಿಂಗ್​ ಕಾರ್ಡ್​ನ್ನು ರಂಭಾ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ನೀರುಗಳ್ಳತನ ತಡೆಯಲು ಸ್ಥಾಪನೆಯಾಗಿದೆ ಪೊಲೀಸ್‌ ಠಾಣೆ…!

ಈ ಫೋಟೋಗೆ ರಂಭಾ, 11 ವರ್ಷಗಳ ಜೊತೆಯಾಗಿರುವ ಈ ಸಂಭ್ರಮಕ್ಕೆ ನಮ್ಮ ಮಗಳು ಈ ಗೂಗ್ಲಿ ಕಾರ್ಡ್​ನ್ನು ಉಡುಗೊರೆಯಾಗಿ ನೀಡಿದ್ದಾಳೆ ಎಂದು ಶೀರ್ಷಿಕೆ ನೀಡಿದ್ದಾರೆ.

1993ರಲ್ಲಿ ಸರ್ವರ್​ ಸೋಮಣ್ಣ ಸಿನಿಮಾ ಮೂಲಕ ನಟಿ ರಂಭಾ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದರು. ಕೆಂಪಯ್ಯ ಐಪಿಎಸ್​, ಓ ಪ್ರೇಮವೇ, ಬಾವ ಬಾಮೈದ, ಪಾಂಡುರಂಗ ವಿಠಲ, ಸಾಹುಕಾರ, ಗಂಡುಗಲಿ ಕುಮಾರ ರಾಮ ಹಾಗೂ ಕೊನೆಯದಾಗಿ ಅನಾಥರು ಸಿನಿಮಾದಲ್ಲಿ ರಂಭಾ ಕಾಣಿಸಿಕೊಂಡಿದ್ದಾರೆ.

View this post on Instagram

A post shared by RambhaIndrakumar? (@rambhaindran_)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...