alex Certify ಚಿತ್ರರಂಗಕ್ಕೆ ಮತ್ತೊಂದು ಶಾಕ್: ತಮಿಳು ಖ್ಯಾತ ನಿರ್ದೇಶಕ ತಮಿರಾ ಕೊರೋನಾಗೆ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರರಂಗಕ್ಕೆ ಮತ್ತೊಂದು ಶಾಕ್: ತಮಿಳು ಖ್ಯಾತ ನಿರ್ದೇಶಕ ತಮಿರಾ ಕೊರೋನಾಗೆ ಬಲಿ

ನವದೆಹಲಿ: ತಮಿಳಿನ ಖ್ಯಾತ ನಿರ್ದೇಶಕ ತಮಿರಾ(53) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ತಗಲಿದ ಅವರನ್ನು ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ನಿಧನದೊಂದಿಗೆ ದಕ್ಷಿಣ ಭಾರತ ಚಲನಚಿತ್ರೋದ್ಯಮಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ರಾಮು ಅವರು ಕೊರೋನಾ ಸೋಂಕಿನಿಂದ ನಿನ್ನೆಯಷ್ಟೇ ಮೃತಪಟ್ಟಿದ್ದಾರೆ.

ಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಮತ್ತು ಭಾರತಿರಾಜ ಅವರ ಸಹಾಯಕರಾಗಿ ತಮಿರಾ ಕೆಲಸ ಮಾಡಿದ್ದರು. ‘ಅನೈದೇವತೆ’ ಸೇರಿದಂತೆ ಅನೇಕ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಸತ್ಯರಾಜ್ ಮತ್ತು ಸೀತಾ ಅಭಿನಯದ ವೆಬ್ ಸರಣಿ ‘ಮೈ ಪರ್ಫೆಕ್ಟ್ ಹಸ್ಬೆಂಡ್’ ನಿರ್ದೇಶಿಸಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...