alex Certify ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಸಿನಿಮಾದ ಲಿರಿಕಲ್​ ಸಾಂಗ್​​ ರಿಲೀಸ್​ಗೆ ದಿನಗಣನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಸಿನಿಮಾದ ಲಿರಿಕಲ್​ ಸಾಂಗ್​​ ರಿಲೀಸ್​ಗೆ ದಿನಗಣನೆ

ಸ್ಯಾಂಡಲ್​​ವುಡ್​ ನಟ ದಿಗಂತ್​​ರ ಬಹು ನಿರೀಕ್ಷಿತ ಸಿನಿಮಾ ʼಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲʼ ಚಿತ್ರದ ಮೊದಲ ಲಿರಿಕಲ್​ ಗೀತೆ ಇದೇ ವಾರ ರಿಲೀಸ್​ ಆಗಲಿದೆ.

ಈ ಬಗ್ಗೆ ಚಿತ್ರತಂಡ ಸೋಶಿಯಲ್​ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ. ಸಿನಿಮಾದ ಮೊದಲ ಲಿರಿಕಲ್​ ಗೀತೆ ಜುಲೈ 8ರಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆಯಾಗಲಿದೆ.

ವಿನಾಯಕ ಕೋಡ್ಸರ ನಿರ್ದೇಶನದ ಈ ಸಿನಿಮಾದಲ್ಲಿ ನಟ ದಿಗಂತ್​ ಮಂಚಾಲೆ, ಐಂದ್ರಿತಾ ರೈ ಹಾಗೂ ರಂಜನಿ ರಾಘವನ್​​ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂಪೂರ್ಣ ಮಲೆನಾಡಿನ ಕತೆ ಇದಾಗಿದ್ದು, ಈ ಸಿನಿಮಾದಲ್ಲಿ ನಟ ದಿಗಂತ್​ ಗೊಬ್ಬರದ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ.

‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್

ಸಂಪೂರ್ಣ ಕಾಮಿಡಿ ಜೋನರ್​​ ಸಿನಿಮಾ ಇದಾಗಿದೆ. ಇನ್ನೊಂದು ವಿಶೇಷ ಅಂದರೆ ದಿಗಂತ್​ ಹಾಗೂ ಐಂದ್ರಿತಾ ದಂಪತಿ ಬರೋಬ್ಬರಿ 7 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಉಪ್ಪಿ ಎಂಟರ್​ಟೈನರ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು ಸಿಲ್ಕ್​ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...