alex Certify ‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಫೇಸ್‌ ಬುಕ್‌ʼ ಸಂಸ್ಥಾಪಕನ ಈ ವಿಡಿಯೋ ವೈರಲ್

ಅಮೆರಿಕದಲ್ಲಿ ಜುಲೈ 4ನೇ ತಾರೀಖನ್ನ ಸ್ವಾತಂತ್ರ್ಯ ದಿನಾಚರಣೆ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನ ದೇಶಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾರತಕ್ಕಿಂತ ಅತ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ. ಪೂಲ್​ ಪಾರ್ಟಿಗಳ ಮೂಲಕ ಈ ದಿನವನ್ನ ಎಂಜಾಯ್​ ಮಾಡಲಾಗುತ್ತದೆ. ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಕೂಡ ಆಗುತ್ತದೆ.

ಫೇಸ್​ಬುಕ್​ ಸ್ಥಾಪಕ ಜುಕರ್​ ಬರ್ಗ್​ ಕೂಡ ಈ ದಿನವನ್ನ ಸಖತ್​ ಎಂಜಾಯ್​ ಮಾಡಿದ್ದಾರೆ. ಅಮೆರಿಕದ ಧ್ವಜವನ್ನ ಕೈಯಲ್ಲಿ ಹಿಡಿದಿರುವ ವಿಡಿಯೋವನ್ನ ಅವರು ಶೇರ್​ ಮಾಡಿದ್ದಾರೆ. ಈ ವಿಡಿಯೋಗಳನ್ನ ಜುಕರ್​ ಬರ್ಗ್​ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್​ನಲ್ಲಿ ಶೇರ್ ಮಾಡಲಾಗಿದೆ.

ಎರಡೂ ವೇದಿಕೆಗಳಲ್ಲಿ ವಿಡಿಯೋವನ್ನ ಶೇರ್​ ಮಾಡಿರುವ ಜುಕರ್​ ಬರ್ಗ್​ ತನ್ನ ಅನುಯಾಯಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ 1 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...