alex Certify ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಸ್ಥಳದಲ್ಲಿ​ ಆರ್ಶಿಗೆ ಮುತ್ತಿಕ್ಕಿದ ಅಭಿಮಾನಿ..! ಹಠಾತ್‌ ಘಟನೆಯಿಂದ ಶಾಕ್‌ ಗೊಳಗಾದ ನಟಿ

ನಟಿ ಹಾಗೂ ಮಾಡೆಲ್​ ಆರ್ಶಿ ಖಾನ್​ ವಿವಾದಿತ ಬಿಗ್​ಬಾಸ್​ ಶೋನಲ್ಲಿ ಕಾಣಿಸಿಕೊಂಡ ಬಳಿಕ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾದಂತವರು. ಆರ್ಶಿ ಖಾನ್​ ಮುಂಬೈನ ವಿವಿಧೆಡೆ ಆಗಾಗ ಕಾಣಿಸಿಕೊಳ್ತಾನೇ ಇರ್ತಾರೆ.

ಸಾಮಾನ್ಯವಾಗಿ ಪತ್ರಕರ್ತರ ಎದುರು ಕಾಣಿಸಿಕೊಳ್ಳುವ ಈ ನಟಿ ಒಂದಿಲ್ಲೊಂದು ಯಡವಟ್ಟಿಗೆ ಸಾಕ್ಷಿಯಾಗುತ್ತಲೇ ಇರ್ತಾರೆ. ಈ ಬಾರಿ ಕೂಡ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿ ಆರ್ಶಿ ಖಾನ್​ ಕೈಗೆ ಮುತ್ತನ್ನಿಕ್ಕಿದ್ದು ಆರ್ಶಿ ಒಮ್ಮೆಲೆ ಶಾಕ್​ ಆಗಿದ್ದಾರೆ.

ಸೋಮವಾರ ಆರ್ಶಿ ಖಾನ್​​ ಮುಂಬೈನ ಏರ್​ಪೋರ್ಟ್​ನ ಲ್ಲಿ ಅಭಿಮಾನಿಗಳ ಜೊತೆ ಕಾಣಿಸಿಕೊಂಡಿದ್ದರು. ಆರ್ಶಿ ಖಾನ್​ರನ್ನ ನೋಡಲು ಬಂದ ಅಭಿಮಾನಿಯನ್ನ ನಗುಮುಖದಿಂದಲೇ ಸ್ವಾಗತಿಸಿದ ಆರ್ಶಿ ಸೆಲ್ಫಿಗೆ ಅನುಮತಿ ನೀಡಿದ್ರು. ಆದರೆ ಆತ ತಕ್ಷಣವೇ ಆಕೆಯ ಕೈಗೆ ಕಿಸ್​ ಮಾಡಿದ್ದಾನೆ. ಆರ್ಶಿ ಖಾನ್​ ಪತ್ರಕರ್ತರನ್ನ ನೋಡುತ್ತಿದ್ದ ವೇಳೆಯಲ್ಲಿ ಅಭಿಮಾನಿ ಈ ರೀತಿ ಮಾಡಿದ್ದಾನೆ.

ಈ ಘಟನೆಯಿಂದ ಆರ್ಶಿ ಖಾನ್​ ಕೆಲಕಾಲ ಶಾಕ್​ಗೆ ಒಳಗಾದ್ರು. ಕೂಡಲೇ ಅಲ್ಲಿಂದ ದೂರ ಸರಿದ ಆರ್ಶಿ ಬಳಿಕ ತಮ್ಮ ಸ್ಥಳಕ್ಕೆ ವಾಪಾಸ್​ ಬಂದ್ರು. ಈ ವೇಳೆ ಏನಾಯ್ತು ಮೇಡಂ ಎಂದು ಕೇಳಿದ ಪ್ರಶ್ನೆಗೆ ಆರ್ಶಿ ಹೊರಡಿ, ಹೊರಡಿ, ಬೇಗ ಹೊರಡಿ ಎಂದಷ್ಟೇ ಹೇಳಿದ್ರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ಆರ್ಶಿ ಖಾನ್​ ತಾನು ವಿವಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದೇ ಇಲ್ಲ ಎಂದು ಹೇಳಿದ್ದಾರೆ. ನನ್ನ ಜೀವನ ವಿವಾದಾತ್ಮಕ ಎನ್ನೋದು ನನಗೂ ತಿಳಿದಿದೆ. ಆದರೆ ನಾನು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದೇ ಇಲ್ಲ ಎಂದು ಹೇಳಿದ್ದಾರೆ.

ವೃತ್ತಿ ಜೀವನದ ಪ್ರಕಾರ ಆರ್ಶಿ ಖಾನ್​ ಕೊನೆಯ ಬಾರಿಗೆ ಬಿಗ್​ ಬಾಸ್​ ಸೀಸನ್​ 14 ಮೂಲಕ ತೆರೆ ಮುಂದೆ ಬಂದಿದ್ದಾರೆ. ಅಲ್ಲದೇ ತೀರಾ ಇತ್ತೀಚಿಗೆ ಅವರು ನಟಿಸಿದ ಸೀರಿಸ್​ನಲ್ಲಿ ಪಂಜಾಬಿ ಮ್ಯೂಸಿಕ್​ ವಿಡಿಯೋಗಾಗಿ ಕೆಲಸ ಮಾಡಿದ್ದಾರೆ.

View this post on Instagram

A post shared by Viral Bhayani (@viralbhayani)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...