alex Certify BIG NEWS: ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ಅಕಾಲಿಕ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ಅಕಾಲಿಕ ನಿಧನ

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ, ನಿರ್ದೇಶಕ ಅನಿಲ್ ದೇವಗನ್ ನಿಧನರಾಗಿದ್ದಾರೆ.

ಅವರ ನಿಧನದಿಂದ ನಮ್ಮ ಕುಟುಂಬ ಎದೆಗುಂದಿದೆ ಎಂದು ಅಜಯ್ ದೇವಗನ್ ಹೇಳಿದ್ದಾರೆ. ಅಜಯ್ ದೇವಗನ್ ಅಭಿನಯದ ‘ರಾಜು ಚಾಚಾ’ ಮತ್ತು ‘ಬ್ಲಾಕ್ಮೇಲ್’ ‘ಸನ್ ಆಫ್ ಸರ್ದಾರ್’ ಚಿತ್ರಗಳನ್ನು ಅನಿಲ್ ದೇವಗನ್ ನಿರ್ದೇಶಿಸಿದ್ದಾರೆ.

ಕಳೆದ ರಾತ್ರಿ ನಾನು ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ಕಳೆದುಕೊಂಡೆ. ಅವರ ಅಕಾಲಿಕ ನಿಧನ ನಮ್ಮ ಕುಟುಂಬವನ್ನು ಎದೆಗುಂದಿಸಿದೆ. ಅವರ ಆತ್ಮಕ್ಕೆ ಶಾಂತಿಗೆ ಪ್ರಾರ್ಥಿಸಿ. ಸಾಂಕ್ರಾಮಿಕ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ವೈಯಕ್ತಿಕ ಪ್ರಾರ್ಥನಾ ಸಭೆ ನಡೆಸುವುದಿಲ್ಲ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ಅವರ ಅಭಿಮಾನಿಗಳು ಸಂತಾಪ ಸೂಚಿಸಿ ದೇವರು ನಿಮ್ಮ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಅಜಯ್ ದೇವಗನ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಜಯ್ ದೇವಗನ್ ಅವರ ತಂದೆ ಬಾಲಿವುಡ್ ಸಾಹಸ ನಿರ್ದೇಶಕ ವೀರು ದೇವಗನ್ ಕಳೆದ ವರ್ಷ ನಿಧನರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...