alex Certify ಸತ್ಯವಾಯ್ತು ವಿರುಷ್ಕಾ ಬಗ್ಗೆ ಹೇಳಿದ್ದ ಭವಿಷ್ಯವಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತ್ಯವಾಯ್ತು ವಿರುಷ್ಕಾ ಬಗ್ಗೆ ಹೇಳಿದ್ದ ಭವಿಷ್ಯವಾಣಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ. ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಖುಷಿ ಸುದ್ದಿಯನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಹಾಗೂ ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ನಾವು ನಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದೇವೆಂದು ಕೊಹ್ಲಿ ಬರೆದುಕೊಂಡಿದ್ದಾರೆ.

ವಿರುಷ್ಕಾ ಬಗ್ಗೆ ಹೇಳಿದ್ದ ಭವಿಷ್ಯ ಈಗ ಸತ್ಯವಾಗಿದೆ. ಜ್ಯೋತಿಷಿ ಜಗನ್ನಾಥ್, ವಿರಾಟ್ ಮತ್ತು ಅನುಷ್ಕಾ ಮನೆಗೆ ದೇವತೆ ಬರಲಿದ್ದಾಳೆ ಎಂದಿದ್ದರು. ಈಗ ಇದು ಸತ್ಯವಾಗಿದೆ. ಬಹುತೇಕ ಪ್ರಸಿದ್ಧ ಕ್ರಿಕೆಟ್ ಆಟಗಾರರ ಮನೆಯಲ್ಲಿ ಮೊದಲು ಹುಟ್ಟಿದ್ದು ಹೆಣ್ಣು ಮಗು ಎಂಬುದು ವಿಶೇಷ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಧೋನಿ ಇದಕ್ಕೆ ಉತ್ತಮ ನಿದರ್ಶನ.

ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಕೊಹ್ಲಿ, ಮೊದಲ ಟೆಸ್ಟ್ ನಂತ್ರ ಭಾರತಕ್ಕೆ ವಾಪಸ್ ಆಗಿದ್ದರು. ಕೊಹ್ಲಿ ಪಿತೃತ್ವ ರಜೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...