alex Certify ನೂಪುರ್ ಸನೂನ್ ಸ್ಲಿಮ್ ಸೀಕ್ರೇಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂಪುರ್ ಸನೂನ್ ಸ್ಲಿಮ್ ಸೀಕ್ರೇಟ್…!

ಪ್ರಸಿದ್ಧ ನಟಿ ಕೃತಿ ಸನೂನ್ ಅವರ ತಂಗಿ ನೂಪುರ್ ಸನೂನ್ ಕೂಡಾ ಬಾಲಿವುಡ್ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅಕ್ಷಯ್ ಕುಮಾರ್ ಜೊತೆಗಿನ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡು ತಮ್ಮ ವರ್ಕೌಟ್ ಬಗ್ಗೆ ವಿವರಿಸಿದ್ದಾರೆ.

ವಾರದಲ್ಲಿ ಆರು ದಿನ ಕಡಿಮೆ ಕ್ಯಾಲೊರಿ ಹೊಂದಿರುವ ಆಹಾರವನ್ನು ಸೇವಿಸಿದರೆ ವಾರಕ್ಕೊಮ್ಮೆ ಮಾತ್ರ ಇಷ್ಟಬಂದಿದ್ದೆಲ್ಲಾ ತಿನ್ನುತ್ತೇನೆ ಎಂದಿದ್ದಾರೆ. ಅದರಲ್ಲೂ ಚೀಸ್ ಪ್ರಿಯೆಯಾಗಿರುವ ನೂಪುರ್ ಒಂದು ದಿನ ಹೆಚ್ಚಿನ ಪ್ರಮಾಣದ ಚೀಸ್ ಉತ್ಪನ್ನಗಳನ್ನೇ ಸೇವಿಸುತ್ತಾರಂತೆ.

ಪಂಜಾಬಿ ದಾಲ್ ಮಖ್ನಿ ಅವರ ಫೇವರಿಟ್ ತಿನಿಸಾದರೂ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ಕೆಲಸ ಮಾಡದ ಪರಿಣಾಮ ಅದನ್ನು ತಿಂದು ಸಮಸ್ಯೆ ಮಾಡಿಕೊಳ್ಳುವುದೇ ಹೆಚ್ಚಂತೆ!

ಹೆಚ್ಚು ತಿಂದದ್ದನ್ನು ಕರಗಿಸಲೇ ಬೇಕಲ್ಲ. ಹಾಗಾಗಿ ಪ್ರತಿ ಸೋಮವಾರ ವರ್ಕೌಟ್ ಗೆ ಹೆಚ್ಚು ಸಮಯ ಮೀಸಲಿಡುತ್ತೇನೆ. ಸಕ್ಕರೆ ಅಂದರೆ ನನಗೆ ಆಗುವುದೇ ಇಲ್ಲ ಎನ್ನುವ ಈ ಬೆಡಗಿ ಮೈದಾ ಹಾಗೂ ಹಾಲಿನಿಂದ ಮಾರು ದೂರ ಓಡುತ್ತಾರಂತೆ.

ವಾರದಲ್ಲಿ ಐದು ದಿನ ಜಿಮ್ ಗೆ ಹೋಗುವ ಈಕೆ ಮೂರು ದಿನ ತೂಕ ನಿಯಂತ್ರಿಸುವ ವ್ಯಾಯಾಮ ಮಾಡಿದರೆ ಒಂದು ದಿನ ಬಾಕ್ಸಿಂಗ್ ಮತ್ತು ಇನ್ನೊಂದು ದಿನವನ್ನು ನಾರ್ಮಲ್ ಜಿಮ್ ಗೆ ಮೀಸಲಿಡುತ್ತಾರೆ.

ಪಾರ್ಕ್ ನಲ್ಲಿ ಓಡಿ ಅರ್ಧ ದಿನ ಕಳೆಯುವ ಈಕೆಗೆ ಸೋಮಾರಿತನ ಎಂಬುದು ಹತ್ತಿರವೂ ಸುಳಿಯುವುದಿಲ್ಲವಂತೆ. ಮನಸ್ಸು ಖುಷಿಯಾಗಿದ್ದರೆ ಎಲ್ಲವೂ ಸುಂದರ ಎನ್ನುವ ನೂಪುರ್ ಸನೂನ್ ಗೆ ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಸಿಗಲಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...