alex Certify ‘ಕಚಾ ಬಾದಮ್‌’ ಹಾಡಿಗೆ ಕುಣಿದು ಕುಪ್ಪಳಿಸಿದ ಪೊಲೀಸರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಚಾ ಬಾದಮ್‌’ ಹಾಡಿಗೆ ಕುಣಿದು ಕುಪ್ಪಳಿಸಿದ ಪೊಲೀಸರು..!

ವೈರಲ್ ಬೆಂಗಾಲಿ ಹಾಡು ‘ಕಚಾ ಬಾದಮ್’ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಹಾಡಿಗೆ ಹಲವಾರು ಮಂದಿ ನೃತ್ಯ ಮಾಡಿದ್ದು, ಇನ್ನೂ ಟ್ರೆಂಡಿಂಗ್ ನಲ್ಲಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಈ ಟ್ರೆಂಡ್ ಎಲ್ಲರನ್ನೂ ಆಕರ್ಷಿಸಿದೆ.

ಇದೀಗ ಈ ಹಾಡಿಗೆ ಕೇರಳ ಪೊಲೀಸರು ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಖಾಕಿ ಡ್ರೆಸ್‌ ಧರಿಸಿರುವ ಪೊಲೀಸರು ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಮಹಿಳಾ ಪೊಲೀಸ್ ಒಬ್ಬರು ಮಾತ್ರ ಅದ್ಭುತವಾಗಿ ಕುಣಿದಿದ್ದರೆ, ಉಳಿದ ಪೊಲೀಸರು ಹೆಜ್ಜೆ ಹಾಕಲು ಸ್ವಲ್ಪ ತ್ರಾಸ ಪಟ್ಟಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಖಾಕಿ ಏಕೆ ಸ್ವಲ್ಪ ಮೋಜು ಮಾಡಬಾರದು ಎಂದು ಶೀರ್ಷಿಕೆ ನೀಡಲಾಗಿದೆ.

ಕೇರಳದ ಕೊಚ್ಚಿಯಲ್ಲಿರುವ ಹೋಟೆಲ್ ಡ್ಯೂಲ್ಯಾಂಡ್‌ನ ಪ್ರವೇಶ ದ್ವಾರದಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿರುವವರು ನಿಜವಾಗಿಯೂ ಪೊಲೀಸರೇ ಅಥವಾ ಕಲಾವಿದರೇ ಎಂಬ ಬಗ್ಗೆ ಯಾವುದೇ ಸ್ಪಷ್ಟೀಕರಣವಿಲ್ಲ.

ಪೊಲೀಸರ ನೃತ್ಯದ ವಿಡಿಯೋ ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ. ಕೆಲವರು ಪೊಲೀಸರ ಮೋಜಿನ ನೃತ್ಯವನ್ನು ಪ್ರೀತಿಸಿದ್ರೆ, ಇನ್ನೂ ಕೆಲವರು ಪೊಲೀಸರು ಸಮವಸ್ತ್ರ ಧರಿಸಿರೋ ವೇಳೆ ನೃತ್ಯ ಮಾಡಿದ್ದನ್ನು ಇಷ್ಟಪಟ್ಟಿಲ್ಲ.

— Da_Lying_Lama🇮🇳 (@GoofyOlives) March 21, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...