3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..! 26-11-2021 12:56PM IST / No Comments / Posted In: Latest News, Live News, International ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್ನಲ್ಲಿನ ಚರ್ಚೆಗೆ ತಂದಿದ್ದಕ್ಕಾಗಿ ಇತ್ತೀಚೆಗೆ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಸಂಸದರಿಗೆ ಹೆರಿಗೆ ರಜೆ ನೀಡಬೇಕೆಂದು ಈ ಹಿಂದೆ ಭಾರಿ ಪ್ರಚಾರ ಮಾಡಿದ್ದ ಕ್ರೀಸಿ, ಸಂಸತ್ತಿನಲ್ಲಿ ನಡೆದ ಚರ್ಚೆಯೊಂದರಲ್ಲಿ ತನ್ನ 3 ತಿಂಗಳ ಮಗುವನ್ನು ಹಿಡಿದುಕೊಂಡು ಮಾತನಾಡಿದ ನಂತರ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಮಗುವಿನ ಜೊತೆಯಲ್ಲಿದ್ದಾಗ ನೀವು ಚೇಂಬರ್ನಲ್ಲಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಬಾರದು ಎಂದು ಲೇಬರ್ ಸಂಸದರು ಟ್ವೀಟ್ ಮಾಡಿದ್ದಾರೆ. ಇನ್ನು ಮಗುವನ್ನು ಹೌಸ್ ಆಫ್ ಕಾಮನ್ಸ್ಗೆ ಕರೆತಂದಿದ್ದಕ್ಕಾಗಿ ಸಂಸದೀಯ ಅಧಿಕಾರಿಯೊಬ್ಬರು ಸಂಸದೆಯನ್ನು ಖಂಡಿಸಿದ ನಂತರ ಸುಧಾರಣೆಗೆ ಕ್ರೀಸಿ ಕರೆ ನೀಡಿದ್ದಾರೆ. ಮೂರು ತಿಂಗಳ ಮಗು ನಿಯಮಿತವಾಗಿ ಎದೆಹಾಲು ಕುಡಿಯುವುದರಿಂದ ಸಂಸದೆ ತನ್ನ ಮಗುವನ್ನು ಸಂಸತ್ತಿಗೆ ಕರೆದುಕೊಂಡು ಬಂದಿದ್ದಾರೆ. ಸಂಸತ್ ಗೆ ಶಿಶುಗಳನ್ನು ನಿಷೇಧಿಸುವ ನಿರ್ಧಾರವು ಆನ್ಲೈನ್ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದೆ, ಇತರೆ ಸಂಸದರು ತಮ್ಮ ಮಕ್ಕಳನ್ನು ವಾಗ್ದಂಡನೆಗೆ ಒಳಗಾಗದೆ ಸಂಸತ್ ಗೆ ಕರೆತಂದಿದ್ದರು. Apparently Parliament has written a rule which means I can’t take my well behaved, 3-month old, sleeping baby when I speak in chamber. (Still no rule on wearing masks btw). Mothers in the mother of all parliament are not to be seen or heard it seems….#21stCenturyCalling pic.twitter.com/rKB7WbYQrL — stellacreasy (@stellacreasy) November 23, 2021