alex Certify 3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ತಿಂಗಳ ಹಸುಳೆಯೊಂದಿಗೆ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದೆಗೆ ಎಚ್ಚರಿಕೆ..!

ನಿದ್ರಿಸುತ್ತಿರುವ ಮಗುವನ್ನು ಸಂಸತ್ತಿಗೆ ತಂದಿದ್ದಕ್ಕಾಗಿ ಬ್ರಿಟಿಷ್ ಸಂಸದೆಗೆ ಖಂಡನೆ ವ್ಯಕ್ತವಾಗಿದೆ. 44 ವರ್ಷ ವಯಸ್ಸಿನ ಸಂಸದೆ ಸ್ಟೆಲ್ಲಾ ಕ್ರೀಸಿ ಅವರು ತನ್ನ ಮಲಗಿದ್ದ ಹಸುಳೆಯನ್ನು ಹೌಸ್ ಆಫ್ ಕಾಮನ್ಸ್‌ನಲ್ಲಿನ ಚರ್ಚೆಗೆ ತಂದಿದ್ದಕ್ಕಾಗಿ ಇತ್ತೀಚೆಗೆ ವಾಗ್ದಂಡನೆಗೆ ಗುರಿಯಾಗಿದ್ದಾರೆ.

ಸಂಸದರಿಗೆ ಹೆರಿಗೆ ರಜೆ ನೀಡಬೇಕೆಂದು ಈ ಹಿಂದೆ ಭಾರಿ ಪ್ರಚಾರ ಮಾಡಿದ್ದ ಕ್ರೀಸಿ, ಸಂಸತ್ತಿನಲ್ಲಿ ನಡೆದ ಚರ್ಚೆಯೊಂದರಲ್ಲಿ ತನ್ನ 3 ತಿಂಗಳ ಮಗುವನ್ನು ಹಿಡಿದುಕೊಂಡು ಮಾತನಾಡಿದ ನಂತರ ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಮಗುವಿನ ಜೊತೆಯಲ್ಲಿದ್ದಾಗ ನೀವು ಚೇಂಬರ್‌ನಲ್ಲಿ ನಿಮ್ಮ ಆಸನದಲ್ಲಿ ಕುಳಿತುಕೊಳ್ಳಬಾರದು ಎಂದು ಲೇಬರ್ ಸಂಸದರು ಟ್ವೀಟ್ ಮಾಡಿದ್ದಾರೆ.

ಇನ್ನು ಮಗುವನ್ನು ಹೌಸ್ ಆಫ್ ಕಾಮನ್ಸ್‌ಗೆ ಕರೆತಂದಿದ್ದಕ್ಕಾಗಿ ಸಂಸದೀಯ ಅಧಿಕಾರಿಯೊಬ್ಬರು ಸಂಸದೆಯನ್ನು ಖಂಡಿಸಿದ ನಂತರ ಸುಧಾರಣೆಗೆ ಕ್ರೀಸಿ ಕರೆ ನೀಡಿದ್ದಾರೆ. ಮೂರು ತಿಂಗಳ ಮಗು ನಿಯಮಿತವಾಗಿ ಎದೆಹಾಲು ಕುಡಿಯುವುದರಿಂದ ಸಂಸದೆ ತನ್ನ ಮಗುವನ್ನು ಸಂಸತ್ತಿಗೆ ಕರೆದುಕೊಂಡು ಬಂದಿದ್ದಾರೆ.

ಸಂಸತ್ ಗೆ ಶಿಶುಗಳನ್ನು ನಿಷೇಧಿಸುವ ನಿರ್ಧಾರವು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದೆ, ಇತರೆ ಸಂಸದರು ತಮ್ಮ ಮಕ್ಕಳನ್ನು ವಾಗ್ದಂಡನೆಗೆ ಒಳಗಾಗದೆ ಸಂಸತ್ ಗೆ ಕರೆತಂದಿದ್ದರು.

— stellacreasy (@stellacreasy) November 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...