alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ವಿಜಯ್ ರಾಘವೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ವಿಜಯ್ ರಾಘವೇಂದ್ರ

Vijay And Spandana: ಸ್ಪಂದನ ಹಾಗೂ ವಿಜಯ್ ನಡುವಿನ ವಯಸ್ಸಿನ ಅಂತರ ಎಷ್ಟು, ದೇವರ ಆಟಕ್ಕೆ ಬಲಿಯಾದ ಪ್ರೀತಿ. - NADUNUDI

ಫ್ಯಾಮಿಲಿ ಹಾಗೂ ಸಸ್ಪೆನ್ಸ್ ಚಿತ್ರಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಚಿನ್ನಾರಿ ಮುತ್ತ ನಟ ವಿಜಯ್ ರಾಘವೇಂದ್ರ ಭಾನುವಾರದಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1982 ರಲ್ಲಿ  ತೆರೆ ಕಂಡ  ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಬಾಲ ಕಲಾವಿದನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರು.

1993 ರಂದು ‘ಚಿನ್ನಾರಿ ಮುತ್ತ’ ಮೂಲಕ ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಪ್ರಶಸ್ತಿ ಪಡೆದುಕೊಂಡರೆ. 1994 ರಲ್ಲಿ ಕೊಟ್ರೇಶಿ ಕನಸು ಸಿನಿಮಾದ ಇವರ ಅದ್ಭುತ ನಟನೆಗೆ ನ್ಯಾಷನಲ್ ಫಿಲ್ಮ್ ಅವಾರ್ಡ್ ನೀಡಲಾಯಿತು.

2002ರಲ್ಲಿ ತೆರೆ ಕಂಡ ‘ನಿನಗಾಗಿ’ ಚಿತ್ರದಲ್ಲಿ ಮೊದಲ ಬಾರಿ ನಾಯಕನಟನಾಗಿ ಕಾಣಿಸಿಕೊಂಡರು. ಬಳಿಕ ‘ಪ್ರೇಮ ಖೈದಿ’ ‘ರೋಮಿಯೋ ಜೂಲಿಯಟ್’ ‘ವಿಕ್ರಂ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು. ಕಳೆದ ವರ್ಷ ‘ಮರೀಚಿ’ ‘ಚೇಸ್ ಆಫ್ ಕೊಂಡಾಣ’ ದಲ್ಲಿ ಕಾಣಿಸಿಕೊಂಡಿದ್ದರು.

ಇವರ ನಟನೆಯ ‘jog 101’ ಮತ್ತು ಗ್ರೇ ಗೇಮ್ಸ್ ಇತ್ತೀಚಿಗಷ್ಟೇ ತೆರೆ ಕಂಡು ಭರ್ಜರಿ ಯಶಸ್ಸು ಕಂಡಿದ್ದು,ವಿಜಯ ರಾಘವೇಂದ್ರ ತಮ್ಮ ಮುಂದಿನ ಸಿನಿಮಾ ‘ರಿಪ್ಪನ್ ಸ್ವಾಮಿ’ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...