ಇಂಟರ್ನೆಟ್ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ ಬಾರಿಸಿದ ಪರಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಕಾಬೂಲ್ ನಿವಾಸಿಗಳಿಗೆ ತಾಲಿಬಾನಿಗಳು ನೀಡಿದ್ದಾರೆ ಈ ವಾರ್ನಿಂಗ್…!
ಹೌದು..! ಮದುವೆ ಶಾಸ್ತ್ರಗಳಲ್ಲಿ ನಿರತಳಾಗಬೇಕಿದ್ದ ವಧು ವರನ ಕೆನ್ನೆಗೆ ಸರಿಯಾಗೇ ಬಾರಿಸಿದ್ದಾಳೆ. ಅಂದಹಾಗೆ ಈಕೆ ಆತನ ಕೆನ್ನೆಗೆ ಬಾರಿಸುವ ವೇಳೆ ನೀಡಿದ ಕಾರಣ ಕೂಡ ನ್ಯಾಯಸಮ್ಮತವಾಗಿಯೇ ಇದೆ. ಶಾಸ್ತ್ರದಲ್ಲಿ ಕುಳಿತಿದ್ದ ವರ ಬಾಯಲ್ಲಿ ಗುಟ್ಕಾ ಅಗೆಯುತ್ತಿದ್ದುದು ವಧುವಿನ ಕೋಪಕ್ಕೆ ಕಾರಣವಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
https://www.youtube.com/watch?v=3n5lZBOrRbs