alex Certify ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಶಾಲೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ಹರಿಬಿಟ್ಟ ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಶಾಲೆಯಲ್ಲೇ ಬಾಲಕಿ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ಹರಿಬಿಟ್ಟ ನಾಲ್ವರು ಅರೆಸ್ಟ್

ಆಂಧ್ರಪ್ರದೇಶದ ಮಂಡವಲ್ಲಿಯಲ್ಲಿ ಬಾಲಕಿಯೊಬ್ಬಳ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರವೆಸಗಿದ್ದನ್ನು ಚಿತ್ರೀಕರಿಸಿ ವಿಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಘಟನೆ ಮೇ 15 ರಂದು ನಡೆದಿದೆ ಎನ್ನಲಾಗಿದ್ದರೂ ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಂಧಿತರನ್ನು ಬಾಳೆ ಬಾಲಸುಬ್ರಹ್ಮಣ್ಯಂ(22), ಗಂಟಶಾಲ ಚಂದ್ರಶೇಖರ್(28), ಪೆದ್ದಿರೆಡ್ಡಿ ಧರ್ಮತೇಜ(19) ಮತ್ತು ಜಯಮಂಗಲ ಹರಿಕೃಷ್ಣ(20) ಎಂದು ಗುರುತಿಸಲಾಗಿದೆ.  ಬಾಲಕನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತೆ ಅಪ್ರಾಪ್ತ ವಯಸ್ಕ ಮತ್ತು ಬಾಲಾಪರಾಧಿ ಪರಿಚಯವಿತ್ತು. ಎಲ್ಲೂರು ಜಿಲ್ಲೆ ಮಂಡವಳ್ಳಿ ಮಂಡಲದ ಚಿಂತಪಾಡು ಗ್ರಾಮದ ಸರ್ಕಾರಿ ಶಾಲೆಗೆ ಪುಸ್ತಕ ತೆಗೆದುಕೊಂಡು ಬರಲು ಆಕೆ ಹೋಗಿದ್ದಳು. 7ನೇ ತರಗತಿ ವಿದ್ಯಾರ್ಥಿನಿಯನ್ನು ಏಕಾಂಗಿಯಾಗಿ ನೋಡಿದ 10ನೇ ತರಗತಿ ವಿದ್ಯಾರ್ಥಿಯಾಗಿರುವ ಬಾಲಕ ಆಕೆಯನ್ನು ಶಾಲೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕನಿಗೆ ಪರಿಚಯವಿದ್ದ ಬಂಧಿತ ವ್ಯಕ್ತಿಗಳು ಈ ಕೃತ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ವೀಡಿಯೋ ಕ್ಲಿಪ್ ಅನ್ನು ಹಲವು ಜನರಿಗೆ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ. ವಿವಿಧ ಸೆಕ್ಷನ್ ಗಳಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...