alex Certify ಕಾಬೂಲ್​ ನಿವಾಸಿಗಳಿಗೆ ತಾಲಿಬಾನಿಗಳು ನೀಡಿದ್ದಾರೆ ಈ ವಾರ್ನಿಂಗ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್​ ನಿವಾಸಿಗಳಿಗೆ ತಾಲಿಬಾನಿಗಳು ನೀಡಿದ್ದಾರೆ ಈ ವಾರ್ನಿಂಗ್​…!

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು, ಕಾಬೂಲ್​ ನಿವಾಸಿಗಳ ಬಳಿ ಸರ್ಕಾರದ ವಾಹನಗಳು, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ವಾರದೊಳಗಾಗಿ ಅದನ್ನು ವಾಪಸ್​ ನೀಡುವಂತೆ ತಾಕೀತು ಮಾಡಿದೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ತಾಲಿಬಾನ್​ ವಕ್ತಾರ ಜಬಿಹುಲ್ಲಾ ಮುಜಾಹಿದ್​, ಕಾಬೂಲ್​ನಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡು ಹಾಗೂ ಇತರೆ ಸರ್ಕಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ಹಿಂದಿರುಗಿಸಬೇಕು. ವಾರದೊಳಗೆ ಸರ್ಕಾರಿ ವಸ್ತುಗಳನ್ನು ಹಿಂದಿರುಗಿಸದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಟ್ವೀಟ್​ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರವನ್ನು ಕೆಡವಿದ ಬಳಿಕ ತಾಲಿಬಾನಿಗಳ ಪಾರುಪತ್ಯಕ್ಕೆ ಅಫ್ಘನ್​ ಜನತೆ ನಲುಗಿ ಹೋಗಿದ್ದಾರೆ. ಮಹಿಳೆಯರ ಮೇಲಿನ ದಬ್ಬಾಳಿಕೆ, ಬಾಂಬ್​ ಸ್ಪೋಟ, ಹಿಂಸಾಚಾರ, ಕೊಲೆ ಹೀಗೆ ಒಂದಿಲ್ಲೊಂದು ಕರುಣಾಜನಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...